ಮತಗಳ್ಳತನ ತಡೆಯದೆ ನೈಜ ಚುನಾವಣೆ ಅಸಾಧ್ಯ: ಸೊರಕೆ

ಉಡುಪಿ, ನ.8: ನೈಜ ಚುನಾವಣೆ ಎಂದು ಕರೆಯಬೇಕಾದರೆ ಮತಗಳ್ಳತನ ನಿಲ್ಲಬೇಕು. ಜನರ ಭಾವನೆಗಳಿಗೆ ಆಸ್ಪದ ನೀಡಬೇಕು. ಚುನಾವಣೆಗಳು ದೋಷ ಮುಕ್ತವಾಗಿ ನಡೆಯಬೇಕು. ಎಂದು ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ ಸೊರಕೆ ಹೇಳಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅವರು ಮಾತನಾಡುತಿದ್ದರು. ಚುನಾವಣಾ ಆಯೋಗದ ಜೊತೆಗೂಡಿ ಬಿಜೆಪಿ ನಡೆಸಿರುವ ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ ಈಗಾಗಲೇ 70ರಿಂದ 80 ಲಕ್ಷ ಸಹಿ ಸಂಗ್ರಹಿಸಲಾಗಿದೆ. ಮತಗಳ್ಳತನವು ರಾಷ್ಟ್ರಮಟ್ಟದ ಗಂಭೀರ ವಿಚಾರವಾಗಿದ್ದು ಸಹಿ ಸಂಗ್ರಹದ ಬಳಿಕ ರಾಷ್ಟ್ರಪತಿಗಳಿಗೆ ಸಲ್ಲಿಕೆ ಮಾಡಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡುವೂರು ಮಾತನಾಡಿ, ಪಕ್ಷ ಬಲಪಡಿಸದೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ. ಕೇಂದ್ರ ಸರಕಾರವು ಮತಗಳ್ಳತನದ ಧೋರಣೆ ನಿಲ್ಲಿಸದಿದಲ್ಲಿ ಚುನಾವಣೆ ನಡೆಸುವುದು ವ್ಯರ್ಥ. ಬಿಜೆಪಿಯ ಈ ಷಡ್ಯಂತ್ರವನ್ನು ಜನತೆಗೆ ತಿಳಿಸಲು ಸಹಿ ಸಂಗ್ರಹ ಅಭಿಯಾನ ಪ್ರಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ನಂತರ ಹರಿಯಾಣದಲ್ಲೂ ಮತಗಳ್ಳತನದ ಆರೋಪ ಕೇಳಿ ಬಂದಿದ್ದು, ಅಂಕಿಅಂಶಗಳೊಂದಿಗೆ ಮತಗಳ್ಳತನ ಹೇಗೆ ನಡೆಯುತ್ತಿದೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನದೊಂದಿಗೆ ಜನಜಾಗೃತಿ ಮೂಡಿಸುವುದು ಅತೀ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎ.ಗಪೂರ್, ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹಾಗೂ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬಿಪಿನ್ ಚಂದ್ರಪಾಲ್ ನಕ್ರೆ ಅವರನ್ನು ಅಭಿನಂದಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಂ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಕೃಷ್ಣ ಶೆಟ್ಟಿ ಬಜಗೋಳಿ, ಹರೀಶ್ ಕಿಣಿ, ದಿನಕರ ಹೇರೂರು, ನವೀನ್ಚಂದ್ರ ಶೆಟ್ಟಿ, ಹಿರಿಯಣ್ಣ, ಶಬ್ಬೀರ್ ಅಹ್ಮದ್, ದೇವಕಿ ಸಣ್ಣಯ್ಯ, ಶಂಕರ್ ಕುಂದರ್, ವೈ.ಸುಕುಮಾರ್, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ ಕರ್ಜೆ, ಶುಭದ ರಾವ್ ಕಾರ್ಕಳ, ರಮೇಶ್ ಶೆಟ್ಟಿ, ಮಹಾಬಲ ಕುಂದರ್, ಪ್ರಖ್ಯಾತ್ ಶೆಟ್ಟಿ, ಜಯ ಕುಮಾರ್, ಕಿರಣ್ ಹೆಗ್ಡೆ, ಡಾ.ಸುನಿತಾ ಶೆಟ್ಟಿ, ಮಮತಾ ಶೆಟ್ಟಿ, ರೋಶನಿ ಒಲಿವೇರಾ, ಹರಿಪ್ರಸಾದ್ ರೈ, ಲಕ್ಷ್ಮೀಶ ಶೆಟ್ಟಿ, ಎಂ.ಪಿ. ಮೊಯಿದಿನಬ್ಬ, ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಹಬೀಬ್ ಅಲಿ, ಸೌರವ್ ಬಲ್ಲಾಳ್, ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ, ಫರ್ಜಾನಾ, ಸಂಜಯ, ಬಾಲಕೃಷ್ಣ ಪೂಜಾರಿ, ಸುರೇಶ್ ಶೆಟ್ಟಿ ಬನ್ನಂಜೆ, ಉದ್ಯಾವರ ನಾಗೇಶ್ ಕುಮಾರ್, ಕಿಶೋರ್ ಕುಮಾರ್ ಎರ್ಮಾಳ್, ಸತೀಶ್ ಕೊಡವೂರು, ಸಂಜಯ ಆಚಾರ್ಯ ಉಪಸ್ಥಿತರಿದ್ದರು.
ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.







