ಜ.10ರಂದು ಹೊನ್ನಾಳದಲ್ಲಿ ಧಾರ್ಮಿಕ ಸಮ್ಮೇಳನ

ಬ್ರಹ್ಮಾವರ, ಜ.8: ಜಮೀಯತೆ ಅಹ್ಲೆ ಹದೀಸ್ ಹೊನ್ನಾಳ ಘಟಕದ ವತಿಯಿಂದ ಹಾಗೂ ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲಾ ಸಮಿತಿಯ ಅಧೀನದಲ್ಲಿ ಇಝಾಹಾರ್-ಎ-ಹಕ್ ಶೀರ್ಷಿಕೆಯಡಿ ಧಾರ್ಮಿಕ ಸಮ್ಮೇಳನವನ್ನು ಜ.10ರಂದು ಸಂಜೆ 4 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಹೊನ್ನಾಳದಲ್ಲಿ ಆಯೋಜಿಸಲಾಗಿದೆ.
ಮುಖ್ಯ ಪ್ರವಚನಕಾರರಾಗಿ ಮುಂಬೈಯ ಶೇಖ್ ಡಾ.ಫಾರೂಕ್ ಅಬ್ದುಲ್ಲಾಹ್ ನಾರಾಯಣಪುರಿ ಮದನಿ, ಯು.ಪಿ.ಯ ಶೇಖ್ ಅಬ್ದುಲ್ ಗಫ್ಫಾರ್ ಸಲಫಿ, ರಾಯದುರ್ಗದ ಶೇಖ್ ವಸೀಮ್ ಜಾಮಿಯಿ ಮದನಿ, ಉಡುಪಿಯ ಶೇಖ್ ಮುಹಮ್ಮದ್ ಆಸೀಫ್ ಜಾಮಿಯಿ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲಾಧ್ಯಕ್ಷ ಅತೀಫ್ ಹುಸೈನ್ ವಹಿಸಲಿರುವರು. ಮುಖ್ಯ ಅತಿಥಿಯಾಗಿ ಯುಎಇಯ ಉದ್ಯಮಿಗಳಾದ ಇಫ್ತೀಕಾರ್ ಅಹಮದ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





