ರೆಂಜಾಳದಲ್ಲಿ ಭೂಕುಸಿತದ ಭೀತಿ: ಎರಡು ಮನೆಗಳಿಗೆ ಅಪಾಯದ ತೂಗುಗತ್ತಿ

ರೆಂಜಾಳ, ಆ.9: ಕೇರಳದ ವಯನಾಡ್ ನಲ್ಲಿ ಭೂಕುಸಿತದ ಭೀಕರ ದೃಶ್ಯಗಳನ್ನು ನೋಡಿದವರಿಗೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಾಲ್ದಬೆಟ್ಟು ಹೇಡ್ಮೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಕಾಣಿಸಿಕೊಂಡಿರುವ ಭೂಕುಸಿತದ ಮುನ್ಸೂಚನೆ ಅದೇ ರೀತಿಯ ಅಪಾಯದ ತೂಗುಗತ್ತಿಯಂತೆ ಗೋಚರಿಸಿದರೆ ಆಶ್ಚರ್ಯವಿಲ್ಲ.
ಹರಿಪ್ರಸಾದ್
ಗುಡ್ಡದ ಬದಿಯಲ್ಲಿ ಕಳೆದ 80 ವರ್ಷಗಳಿಂದ ಮನೆ ಮಾಡಿಕೊಂಡು ವಾಸಿಸುತ್ತಿರುವ ಹರಿಪ್ರಸಾದ್ ಹಾಗೂ ಅವರ ಅಕ್ಕ ಸುಮಿತ್ರಾ ಅವರ ಕುಟುಂಬದ ಮನೆ ಈಗ ಭೂಕುಸಿತದ ನೇರ ಅಪಾಯವನ್ನು ಎದುರಿಸುತಿದ್ದು ಎರಡೂ ಕುಟುಂಬಗಳನ್ನು ಸದ್ಯಕ್ಕೆ ಖಾಲಿ ಮಾಡಿಸಲಾಗಿದೆ. ಆಸುಪಾಸಿನ ಸುಮಾರು 14 ಮನೆಗಳಿಗೆ ಗ್ರಾಪಂನಿಂದ ನೋಟೀಸು ನೀಡಲಾಗಿದ್ದು ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮನೆಯವರು ಹೇಳುತ್ತಾರೆ.
ಆದರೆ ಸದ್ಯಕ್ಕೆ ಅಪಾಯದಲ್ಲಿರುವುದು ಈ ಎರಡು ಮನೆಯವರು. 44 ವರ್ಷ ಪ್ರಾಯದ ಹರಿಪ್ರಸಾದ್ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತಿದ್ದಾರೆ. ಅವರ ಕುಟುಂಬ ಒಟ್ಟಾಗಿ ಇಲ್ಲಿ 1.60 ಎಕರೆ ಭೂಮಿಯನ್ನು ಹೊಂದಿದೆ. ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಾಧಾರಣ ಹಂಚಿನ ಮನೆಯಲ್ಲಿ ವಾಸಿಸುವ ಹರಿಪ್ರಸಾದ್ರಂತೆ ಅಲ್ಲೇ ಪಕ್ಕದಲ್ಲಿ ಅಕ್ಕ ಸುಮಿತ್ರಾ ಅವರು ವಾಸಿಸುತ್ತಿದ್ದು ಅಲ್ಲೂ ಮೂವರು ಇದ್ದಾರೆ.
ಹರಿಪ್ರಸಾದ್ ಹೇಳುವಂತೆ ಕಳೆದ ಆಗಸ್ಟ್ 2ರ ರಾತ್ರಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಮೂರರಂದು ಬೆಳಗ್ಗೆ ಎದ್ದು ನೋಡುವಾಗ ಅವರ ಮನೆಯಿಂದ 50 ಮೀ. ದೂರದಲ್ಲಿ ಸಮತಟ್ಟಾಗಿದ್ದ ನೆಲ ಒಮ್ಮಿಂದೊಮ್ಮೆಗೆ ಮೇಲಕ್ಕೆ ಎದ್ದಿದೆ. ನೆಲದೊಳಗಿದ್ದ, ಇವರು ತೆಗೆಯಲು ಅಸಾದ್ಯವೆಂದು ಬಿಟ್ಟಿದ್ದ ಕಲ್ಲುಬಂಡೆ ಸಹಿತ ಮಣ್ಣಿನ ರಾಶಿ ಮೇಲಕ್ಕೆ ಎದ್ದು ಬಂದಿತ್ತು.
ಆಶ್ಚರ್ಯಚಕಿತರಾದ ಹರಿಪ್ರಸಾದ್ ಅಲ್ಲೇ ಮೇಲೆ ಗುಡ್ಡದತ್ತ ಸಾಗಿದಾಗ ಇನ್ನಷ್ಟು ಅಚ್ಚರಿ ಕಾದಿತ್ತು. ಮೇಲೆ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಭೂಕುಸಿತವಾಗಿತ್ತು. ಅಲ್ಲದೇ ಆ ಜಾಗದ ಸುತ್ತ ಭೂಮಿಯಲ್ಲಿ ಕಾಣಿಸಿಕೊಂಡ ಬಿರುಕು ಅಗಲಗೊಳ್ಳುತ್ತಾ ಸಾಗಿದ್ದು, ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ ಎಂದು ಹರಿಪ್ರಸಾದ್ ಹೇಳುತ್ತಾರೆ. ಆಶ್ಚರ್ಯಚಕಿತರಾದ ಹರಿಪ್ರಸಾದ್ ಅಲ್ಲೇ ಮೇಲೆ ಗುಡ್ಡದತ್ತ ಸಾಗಿದಾಗ ಇನ್ನಷ್ಟು ಅಚ್ಚರಿ ಕಾದಿತ್ತು. ಮೇಲೆ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಭೂಕುಸಿತವಾಗಿತ್ತು. ಅಲ್ಲದೇಆಜಾಗದಸುತ್ತೂಮಿಯಲ್ಲಿ ಕಾಣಿಸಿಕೊಂಡ ಬಿರುಕು ಅಗಲಗೊಳ್ಳುತ್ತಾ ಸಾಗಿದ್ದು, ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ ಎಂದು ಹರಿಪ್ರಸಾದ್ ಹೇಳುತ್ತಾರೆ.
ಕೆಲವು ಕಡೆ ಈ ಬಿರುಕು ಐದಾರು ಅಡಿಗಳಷ್ಟು ಅಗಲವಾಗಿದ್ದು, ಒಳಗೆ ನೀರು ತುಂಬಿದೆ. ಕೆಳ ಬದಿಯಲ್ಲಿ ಕಾಣಿಸಿಕೊಂಡಿರುವ ಬಿರುಕು ಈಗ ಚಿಕ್ಕದಾಗಿದ್ದರೂ ಅದು ಸಹ ವಿಸ್ತರಿಸಿಕೊಳ್ಳುತ್ತಿದೆ ಎನ್ನುತ್ತಾರೆ ಪರಿಸರದ ಜನ. ಅಗಸ್ಟ್ 2 ಹಾಗೂ 3ರಂದು ಇಲ್ಲಿ ಬಿದ್ದ ಮಳೆ ಮತ್ತೆ ಅದೇ ಪ್ರಮಾಣದಲ್ಲಿ ಸುರಿದರೆ ದೊಡ್ಡಮಟ್ಟದಲ್ಲಿ ಭೂಕುಸಿತದ ಭೀತಿ ಇಲ್ಲೂ ಕಾಣಿಸಿಕೊಳ್ಳಬಹುದು ಎಂದು ಅವರು ಭೀತಿ ವ್ಯಕ್ತಪಡಿಸುತ್ತಾರೆ.
ಮನೆ ಎದುರು ಸಣ್ಣ ಗುಡ್ಡ ನಿರ್ಮಾಣ ಹಾಗೂ ಮನೆಯ ಮೇಲ್ಭಾಗದಲ್ಲಿ ಭೂಕುಸಿತವನ್ನು ಗಮನಿಸಿದ ಹರಿಪ್ರಸಾದ್ ತಕ್ಷಣ ಮಾಜಿ ಗ್ರಾಪಂ ಅಧ್ಯಕ್ಷ ರಮೇಶ್ ಅವರ ಗಮನಕ್ಕೆ ಇದನ್ನು ತಂದರು. ಅವರು ಗ್ರಾಪಂನ ಪಿಡಿಒ ಹಾಗೂ ತಹಶೀಲ್ದಾರ್ರಿಗೆ ಈ ಮಾಹಿತಿಯನ್ನು ನೀಡಿದ್ದು, ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಎಚ್ಚರ ವಹಿಸುವಂತೆ ಸೂಚಿಸಿದರು.
ಮರುದಿನ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಮನೆ ಖಾಲಿ ಮಾಡಿ ರೆಂಜಾಳ ಸರಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡುವಂತೆ ಸೂಚಿಸಿದರು. ಆದರೆ ಕುಟುಂಬದೊಂದಿಗೆ ಶಾಲೆ ನಡೆಯುತ್ತಿರುವಾಗ ಅಲ್ಲಿರುವುದು ನಮಗೆ ಸರಿಯಾಗದ ಕಾರಣ ನಾವು ಹೋಗಲಿಲ್ಲ. ರಾತ್ರಿ ಬಳಿಕ ನಾವು ಸಮೀಪದ ನಮ್ಮ ಸಂಬಂಧಿಕರ ಮನೆಯಲ್ಲಿರುತ್ತೇವೆ ಎಂದರು. ಸುಮಿತ್ರಾ ಕುಟುಂಬ ಒಂದು ದಿನ ಕಾಳಜಿ ಕೇಂದ್ರದಲ್ಲಿದ್ದರೂ ಈಗ ಅವರೂ ಸಹ ಕುಟುಂಬಿಕರ ಮನೆಯಲ್ಲಿರುತ್ತಾರೆ.
ಜಿಲ್ಲಾಧಿಕಾರಿಯ ಸೂಚನೆಯಂತೆ ಮರುದಿನ ಬೆಂಗಳೂರಿನಿಂದ ಜಿಯಾಲಾಜಿಕಲ್ ಸರ್ವೆ ಇಲಾಖೆಯ ಹಿರಿಯ ಭೂವಿಜ್ಞಾನಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿವರವಾಗಿ ಪರಿಶೀಲಿಸಿದ್ದು, ಸದ್ಯ ಮನೆ ಖಾಲಿ ಮಾಡುವಂತೆ ಎರಡು ಕುಟುಂಬಗಳಿಗೆ ಸೂಚಿಸಿದ್ದಾರೆ. ಎಂಟು ದಿನಗಳಲ್ಲಿ ವಿವರವಾದ ವರದಿಯನ್ನು ನೀಡುವುದಾಗಿ ಅಧಿಕಾರಿಗಳು ಹೇಳಿದ್ದು, ಅದರ ಆಧಾರದಲ್ಲಿ ಪರಿಹಾರ ಕಾರ್ಯಕ್ಕೆ ಮುಂದಾಗುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ಸಚಿವ ಖಾದರ್ ಭೇಟಿ:
ಮಳೆಗಾಲಕಳೆಯುವವರೆಗೆಇಲ್ಲಿರುವುದುಅಪಾಯಎಂದುನಮಗೂತಿಳಿದಿದೆ.ಆದರೆವಾಸ್ತವ್ಯಕ್ಕೆಸೂಕ್ತವ್ಯವಸ್ಥೆಮಾಡಬೇಕೆಂಬುದುನಮ್ಮಬೇಡಿಕೆಯಾಗಿದೆಎಂದುಸಂತ್ರಸ್ಥಎರಡುಕುಟುಂಬಗಳೂಹೇಳುತ್ತವೆ.ಇದೇಮಾತನ್ನುಹರಿಪ್ರಸಾದ್ಹಾಗೂಸುಮಿತ್ರಾಕುಟುಂಬಇಂದುಸ್ಥಳಕ್ಕೆೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಮುಂದಿರಿಸಿದರು. ಅವರ ಬೇಡಿಕೆಯನ್ನು ಆಲಿಸಿದ ಖಾದರ್, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸೆಪ್ಟಂಬರ್ ತಿಂಗಳವರೆಗೆ (ಮಳೆಗಾಲ ಮುಗಿಯುವವರೆಗೆ) ಇವರಿಗೆ ಬಾಡಿಗೆ ಮನೆಯಲ್ಲಾದರೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಂದೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಬಹುದು ಎಂದು ಅವರು ತಿಳಿಸಿದರು.
ಇದೇ ವೇಳೆ ಭೂಕುಸಿತ ಸಂಭವಿಸಬಹುದಾದ ಪ್ರದೇಶಕ್ಕೆ ಸಾರ್ವಜನಿಕ ರ್ಯಾರು ಹೋಗದಂತೆ ಸೂಚನೆಗಳನ್ನು ಅಲ್ಲಲ್ಲಿ ಹಾಕಲಾಗಿದೆ. ಅಲ್ಲಿಗೆ ಹೋಗುವವರಿಗೆ ಎಚ್ಚರಿಕೆ ನೀಡಲು ಸಿಬ್ಬಂದಿಯನ್ನು ಇರಿಸಲಾಗಿದೆ. ಬಿರುಕು ಬಿಟ್ಟ ಪ್ರದೇಶದ ಆಸುಪಾಸು ಯಾರೂ ಹೋಗದಂತೆ ಇವರು ಎಚ್ಚರಿಕೆ ನೀಡುತ್ತಾರೆ.
-ಹರಿಪ್ರಸಾದ್, ಭೂಕುಸಿತ ಕಂಡುಬಂದ ಪ್ರದೇಶ ನಿವಾಸಿ ಹೇಡ್ಮೆ ರೆಂಜಾಳ






