ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಉಡುಪಿ, ಜ.26: ತೋನ್ಸೆ-ಹೂಡೆ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಉದ್ಯಮಿ ಅಮಾನುಲ್ಲಾಹ್ ಬೇಂಗ್ರೆ ಧ್ವಜಾ ರೋಹಣ ನೆರವೇರಿಸಿದರು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಸಬೀನ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ದಿವ್ಯ ಪೈ, ಅಕಾಡೆಮಿಕ್ ಮುಖ್ಯಸ್ಥ ಅಬ್ದುಲ್ ಹಸೀಬ್, ಅರಬಿಕ್ ಕಾಲೇಜು ಪ್ರಾಂಶುಪಾಲೆ ಕುಲ್ಸುಮ್ ಅಬುಬಕರ್, ಮುಖ್ಯೋಪಾಧ್ಯಯಿನಿಯರಾದ ಸುನಂದ, ಯಾಸ್ಮೀನ್ ಹಾಗೂ ಶಾದತ್ ಉಪಸ್ಥಿತರಿದ್ದರು.
ಆಸಿರ ಮೈಮುನ ಸ್ವಾಗತಿಸಿದರು. ಮಿ್ರ ಮುಜಮ್ಮಿಲ್ ಹಾಗು ಆಯೇಶ ಸನ ಕಾರ್ಯಕ್ರಮ ನಿರೂಪಿಸಿದರು. ಫಾತಿಮ ಆನಿಯ ವಂದಿಸಿದರು.
Next Story





