ರಸ್ತೆ ಅಪಘಾತ: ವ್ಯಕ್ತಿ ಅನುಮಾನಾಸ್ಪದ ಸಾವು

ಸಾಂದರ್ಭಿಕ ಚಿತ್ರ
ಗಂಗೊಳ್ಳಿ, ನ.11: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನ.10ರಂದು ಸಂಜೆ ಗುಜ್ಜಾಡಿ ಗ್ರಾಮದ ಮಾವಿನಕಟ್ಟೆ ಬಳಿ ನಡೆದಿದೆ.
ಮೃತರನ್ನು ಗಂಗೊಳ್ಳಿಯ ಜಿ.ಮುಹಮ್ಮದ್ ಇರ್ಪಾನ್(66) ಎಂದು ಗುರುತಿಸಲಾಗಿದೆ.
ಇವರು ತ್ರಾಸಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಬೈಕಿನಲ್ಲಿ ಬರುತ್ತಿರುವಾಗ ರಸ್ತೆ ಅಪಘಾತವಾಗಿ ಅಥವಾ ಯಾವುದೋ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಅಪಘಾತ ನಂತರ ಮೃತದೇಹವನ್ನು ಮತ್ತು ಬೈಕ್ ಅನ್ನು ರಸ್ತೆಯ ಬದಿಯಿಂದ ಸುಮಾರು 8 ಅಡಿ ದೂರಕ್ಕೆ ಹಾಕಿರುವ ಸಾಧ್ಯತೆ ಇರುವುದು ಕಂಡುಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





