ಗ್ರಾಹಕನ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಕಳವು

ಕುಂದಾಪುರ, ಜ.28: ಚಿನ್ನಾಭರಣ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಕಳವು ಮಾಡಿಕೊಂಡು ಹೋಗಿವು ಘಟನೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಜ.27ರಂದು ಸಂಜೆ ವೇಳೆ ನಡೆದಿದೆ.
ಶಿರೂರಿನ ಮುಹಮ್ಮದ್ ಕಾಸಿಮ್ ಎಂಬವರ ಎಸ್‌ಪಿಜಿ ಗೋಲ್ಡ್ ಆ್ಯಂಡ್ ಡೈಮಂಡ್ ಅಂಗಡಿಗೆ 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದು, ಆತ ಅಂಗಡಿಯ ಕೆಲಸದವರಿಂದ ಚಿನ್ನದ ಸರವನ್ನು ನೋಡಿ ಅವರ ಕಣ್ಣು ತಪ್ಪಿಸಿ 1,25,000 ರೂ. ಮೌಲ್ಯದ ಸುಮಾರು 9 ಗ್ರಾಮ್ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





