ಅಕ್ರಮ ಸ್ಪೋಟಕ ಬಳಸಿ ಬಂಡೆ ಸ್ಪೋಟ: ಪ್ರಕರಣ ದಾಖಲು

ಕಾರ್ಕಳ, ಜ.24: ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲುಬಂಡೆಗಳನ್ನು ಒಡೆದಿರುವ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿಚಂದ್ರ ಹಾಗೂ ಪವನ್ ಎಂಬವರು ಜ.21ರಂದು ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವ ಕುರಿತ ಮಾಹಿತಿ ಯಂತೆ ಕಾರ್ಕಳ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಸೀನ್ ಆಫ್ ಕ್ರೈಮ್ ಆಫೀಸರನ್ನು ಕರೆಸಿ, ಸ್ಥಳ ಪರಿಶೀಲನೆ ನಡೆಸಿದ್ದು, ಅವರು ನೀಡಿದ ವರದಿಯಲ್ಲಿ, ಬಂಡೆ ಒಡೆಯಲು ಸ್ಪೋಟಕಗಳನ್ನು ಬಳಸಿರುವುದು ತಿಳಿಸಲಾಗಿದೆ. ಅದರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Next Story





