2 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕುಂದಾಪುರ, ಆ.3: ವಕ್ತಿಯೊಬ್ಬರ ಗೂಗಲ್ ಪೇ ಹ್ಯಾಕ್ ಮಾಡಿ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.2ರಂದು ಕೋಣಿ ಗ್ರಾಮದ ಪ್ರಭಾಕರ(60) ಎಂಬವರ ಗೂಗಲ್ ಪೇ ಓಪನ್ ಆಗದೆ ಇದ್ದಾಗ, ಬ್ಯಾಂಕ್ ಖಾತೆ ಅಕೌಂಟ್ ಸ್ಟೇಟ್‌ಮೆಂಟ್ ತೆಗೆದು ನೋಡಿದಾಗ ಇವರ ಖಾತೆಯಲ್ಲಿದ್ದ ಒಟ್ಟು ಸುಮಾರು 2,07,891ರೂ. ಹಣವನ್ನು ಆನ್‌ಲೈನ್ ವಂಚಕರು ಮೋಸಮಾಡಿ ಪಡೆದುಕೊಂಡಿರುವುದು ಕಂಡುಬಂದಿದೆ ಎಂದು ದೂರಲಾಗಿದೆ.
Next Story





