ಸ್ಕೂಟರ್ ಢಿಕ್ಕಿ: ಗಾಯಾಳು ಪಾದಚಾರಿ ಮೃತ್ಯು

ಶಿರ್ವ, ಜ.4: ಶಿರ್ವ ಬಿಸಿ ರೋಡ್ ಜಂಕ್ಷನ್ ಸಮೀಪ ಸ್ಕೂಟರೊಂದು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪಾಂಬೂರು ಶಾಂತಿಪುರ ನಿವಾಸಿ ಲಕ್ಷ್ಮಣ್ ರಾವ್(65) ಎಂದು ಗುರುತಿಸಲಾಗಿದೆ. ಇವರು ಜ.1ರಂದು ಮಧ್ಯಾಹ್ನ ರಸ್ತೆಯನ್ನು ದಾಟುತ್ತಿರುವಾಗ ಶಿರ್ವದಿಂದ ದುರ್ಗಾನಗರ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆ ನ್ನಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದು, ಬಿಡುಗಡೆಗೊಂಡು ಮನೆಗೆ ಬಂದಿದ್ದರು. ಜ.3ರಂದು ಮನೆಯಲ್ಲಿ ಮಲಗಿದ್ದ ಅವರು ತೀವ್ರವಾಗಿ ಅಸ್ವಸ್ಥ ಗೊಂಡಿದ್ದು, ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





