ಅಡ್ಡಬಂದ ನಾಯಿ; ಸ್ಕೂಟರ್ ಮಗುಚಿ ಸಹಸವಾರೆ ಮೃತ್ಯು

ಬ್ರಹ್ಮಾವರ, ಜ.29: ಹಠಾತ್ತನೆ ನಾಯಿಯೊಂದು ರಸ್ತೆಗೆ ಅಡ್ಡಬಂದ ಕಾರಣ ಸ್ಕೂಟರ್‌ಗೆ ಬ್ರೇಕ್ ಹಾಕಿದ್ದರಿಂದ ಹಿಂಬದಿ ಕುಳಿತಿದ್ದ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾದ ಗಾಯದಿಂದ ಮೃತಪಟ್ಟ ಘಟನೆ ಇಂದು ಬೆಳಗ್ಗೆ 8ಗಂಟೆ ಸುಮಾರಿಗೆ ಕಾಡೂರು ಗ್ರಾಮದ ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ನಡೆದಿದೆ.
ಮೃತ ಮಹಿಳೆಯರನ್ನು ಕರುಣಾಕರ ಶೆಟ್ಟಿ ಎಂಬವರ ಪತ್ನಿ ಸುಮತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಕರುಣಾಕರ ಶೆಟ್ಟಿ ಚಲಾಯಿಸುತಿದ್ದ ಸ್ಕೂಟರ್‌ನಲ್ಲಿ ಹಿಂಬದಿ ಸವಾರೆಯಾಗಿ ಬರುತಿದ್ದಾಗ ಕಾಡೂರು ದೇವಸ್ಥಾನದ ಬಳಿ 8:00ಗಂಟೆ ಸುಮಾರಿಗೆ ಘಟನೆ ನಡೆದಿದೆ. ತಲೆಗೆ ತೀವ್ರವಾಗಿ ಗಾಯಗೊಂಡ ಸುಮತಿ ಅವರನ್ನು ಕೂಡಲೇ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆ ತಂದರೂ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿ ದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





