ಅ.29ರಂದು ಹಿರಿಯ ಸಾಹಿತಿ ಯಂಡಮೂರಿ ಉಡುಪಿಗೆ ಭೇಟಿ

ಉಡುಪಿ, ಅ.21: ಕರ್ನಾಟಕದಲ್ಲಿ ಅತಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿರುವ ತೆಲುಗು ಮೂಲದ ಹಿರಿಯ ಸಾಹಿತಿ, ಕಾದಂಬರಿಕಾರ ಯಡಂಮೂರಿ ವೀರೇಂದ್ರನಾಥ್ ಅ.29ರಂದು ರವಿವಾರ ಉಡುಪಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲಿದ್ದಾರೆ.
ಅ.29ರಂದು ಸಂಜೆ 5:00ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿರುವ ಖ್ಯಾತ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರುಮನೆ ಇವರ ‘ಕಣ್ಣಿಗೆ ಕಾಣುವ ದೇವರು’ ಕೃತಿಯ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸುವ ಅವರು ‘ಪೋಷಕರು ಆರು ಬಗೆ; ನೀವ್ಯಾರು?’ ಎಂಬ ವಿಷಯದ ಕುರಿತು ಮಾತನಾ ಡಲಿದ್ದಾರೆ. ಅದೇ ರೀತಿ ರೂಬಿಕ್ ಕ್ಯೂಬ್ ಗ್ರಾಂಡ್ ಮಾಸ್ಟರ್ ಆಫಾನ್‌ಕುಟ್ಟಿ ಇವರು ‘ಅಂತರ್ಜಾಲ ವ್ಯಸನದಿಂದ ರೂಬಿಕ್ಸ್ ಕ್ಯೂಬ್‌ನ ಇಂದ್ರಜಾಲದತ್ತ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಮನೋರೋಗ ತಜ್ಞ ಹಾಗೂ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಎನ್‌ಜಿಓ ಒನ್‌ಗುಡ್ ಸ್ಟೆಪ್‌ನ ಸ್ಥಾಪಕಿ ಹಾಗೂ ಟ್ರಸ್ಟಿ ಅಮಿತಾ ಪೈ ಹಾಗೂ ಕೃತಿಯ ಪ್ರಕಾಶಕರಾದ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಉಪಸ್ಥಿತರಿರುವರು ಎಂದು ಕೃತಿ ಲೇಖಕರ ಪ್ರಕಟಣೆ ತಿಳಿಸಿದೆ.





