ಪ್ರತ್ಯೇಕ ಪ್ರಕರಣ: ವಿದ್ಯಾರ್ಥಿನಿ ಸಹಿತ ಮೂವರು ಆತ್ಮಹತ್ಯೆ

ಶಂಕರನಾರಾಯಣ, ಆ.13: ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಸಿದ್ದಾಪುರ ಗ್ರಾಮದ ರಮೇಶ(52) ಎಂಬವರು ಆ.12ರಂದು ಬೆಳಗ್ಗೆ ಮನೆಯ ಎದುರಿನ ಮಾಡಿನ ಬಿದಿರು ಗಳಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರು: ಹೆಮ್ಮಾಡಿಯ ಜನತಾ ಹೈಸ್ಕೂಲ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಅರುಣ್ ಎಂಬವರ ಮಗಳು ಅನನ್ಯ(17) ಎಂಬವರು ಅನಾರೋಗ್ಯ ಕಾರಣಕ್ಕಾಗಿ ಕಳೆದ ಒಂದು ತಿಂಗಳಿನಿಂದ ಕಾಲೇಜಿಗೆ ಹೋಗದೆ ಮನೆಯ ಲ್ಲಿದ್ದು, ಆ.13ರಂದು ಬೆಳಗ್ಗೆ ಅನನ್ಯಾ ಮನೆಯ ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ಮೆಣ್ಪ(60) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಆ.13ರಂದು ಬೆಳಗ್ಗೆ ನಡ್ಸಾಲು ಗ್ರಾಮದ ಪಂಚಕಾಡಿನ ಮೂಲ ಮನೆಯ ಶೌಚಾಲಯದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





