ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

ಬೈಂದೂರು, ಡಿ.22: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಉಪ್ಪುಂದ ನಿವಾಸಿ ವಿಠ್ಠಲ್ ಶೇಟ್(63) ಎಂಬವರು ಡಿ.6ರಂದು ಮನೆಯಿಂದ ಹೋದವರು ಈತನಕ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಲ್ಲೂರು ಗ್ರಾಮದ ಅದಮಾರು ಅಂಬೇಡ್ಕರ್ ನಗರ ನಿವಾಸಿ ಕೃಷ್ಣಪ್ಪ (65) ಎಂಬವರು ಡಿ.21ರಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





