ಪಡುಬಿದ್ರೆ ಬೀಚ್ ನಲ್ಲಿ ಕಡಲ್ಕೊರೆತ ತೀವ್ರ: ರಂಗ ವೇದಿಕೆ, ವಾಚಿಂಗ್ ಟವರ್ ಸಮುದ್ರಪಾಲಾಗುವ ಭೀತಿ

ಪಡುಬಿದ್ರೆ, ಜು.19: ಕಳೆದೆರಡು ದಿನಗಳಿಂದ ಮಳೆಯಬ್ಬರ ತಗ್ಗಿದ್ದರೂ ಪಡುಬಿದ್ರೆ ಬೀಚ್ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.
ಕಳೆದ ಎರಡು ದಿನಗಳಿಂದ ಪಡುಬಿದ್ರೆಯ ಮುಖ್ಯಬೀಚ್ ಭಾಗದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಇಂದು ಭಾರೀ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಕಡಲ್ಕೊರೆತ ತೀವ್ರಗೊಂಡಿದೆ. ಇಲ್ಲಿ ಬೀಚ್ ಅಭಿವೃದ್ಧಿಗೆ ನಿರ್ಮಿಸಲಾದ ರಂಗ ವೇದಿಕೆ, ಅಳವಡಿಸಿದ ಇಂಟರ್ ಲಾಕ್ ಟೈಲ್ಸ್ ಗಳು, ಇಲೆಕ್ಟ್ರಿಕ್ ಪೋಲ್ ಗಳು, ಶೌಚಾಲಯಗಳು, ವಾಚಿಂಗ್ ಟವರ್, ಹಟ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಸಮುದ್ರಪಾಲಾಗುವ ಭೀತಿ ಎದುರಾಗಿದೆ.
Next Story







