ಕಾಪು| ಕೌನ್ಸಿಲಿಂಗ್ ಸೆಂಟರ್ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಆಪ್ತ ಸಮಾಲೋಚಕನ ಬಂಧನ

ನಿರಂಜನ ಶೇಖರ ಶೆಟ್ಟಿ
ಕಾಪು: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಪ್ತ ಸಮಾಲೋಚಕನನ್ನು ಕಾಪು ಪೊಲೀಸರು ನ.15ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ಮಲ್ಲಾರು ಗ್ರಾಮದ ನಿರಂಜನ ಶೇಖರ ಶೆಟ್ಟಿ(52) ಬಂಧಿತ ಆರೋಪಿ.
ಮಹಿಳೆಯೊಬ್ಬರು ದಾಂಪತ್ಯ ಸಮಸ್ಯೆಯ ಕಾರಣದಿಂದ ಕೌನ್ಸಿಲಿಂಗ್ ಬಗ್ಗೆ ಕಾಪು ತಾಲೂಕಿನ ಮೂಳೂರು ಗ್ರಾಮದ ಕಂಕಣಗುತ್ತು ಕಂಪೌಂಡ್ನಲ್ಲಿರುವ ಸುನಂದಾ ವೆಲ್ನೆಸ್ ಸೆಂಟರ್ಗೆ ಹೋಗಿದ್ದರು. ಅಲ್ಲಿ ನಿರಂಜನ ಶೇಖರ ಶೆಟ್ಟಿ ಸಂತ್ರಸ್ಥೆಯನ್ನು ಕೌನ್ಸಿಲಿಂಗ್ ಮಾಡುವಾಗ ದೈಹಿಕ ಸ್ಪರ್ಶ ಮಾಡಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿದ್ದಾರೆ.
ಈ ಬಗ್ಗೆ ಸಂತ್ರಸ್ಥೆಯು ಕಾಪು ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿತ್ತು. ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದಾ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಅಲಿ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ಠಾಣಾ ಎಸ್ಸೈ ಶುಭಕರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.





