ಶಿರೂರು ಸ್ವಾಮೀಜಿಗೆ ಅಲೆವೂರಿನಲ್ಲಿ ಹುಟ್ಟೂರ ಸನ್ಮಾನ

ಉಡುಪಿ, ಜ.13: ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಭಾವೀ ಪರ್ಯಾಯ ಶೀರೂರು ಶ್ರೀ ವೇದ ವರ್ಧನ ತೀರ್ಥ ಸ್ವಾಮೀಜಿ ಅವರಿಗೆ ಹುಟ್ಟೂರ ಸನ್ಮಾನ ಅಲೆವೂರು ಗುಡ್ಡೆ ಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಮಂಗಳವಾರ ನಡೆಯಿತು.
ಸ್ವಾಮೀಜಿ ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಗೆ ಗೌರವದ ಅಭಿನಂದನೆ ಸಲ್ಲಿಸಲಾಯಿತು. ನಂತರ ಸಂಕಲ್ಪ ಸಭಾಂಗಣದಿಂದ ಸ್ವಾಮೀಜಿ ಅವರಿಗೆ ವಿವಿಧ ಭಜನಾ ತಂಡಗಳು, ಕೊಂಬು, ವಾದ್ಯ, ಚೆಂಡೆ, ಬ್ಯಾಂಡ್ ಹಾಗೂ ಇನ್ನಿತರ ವೇಷಭೂಷಣದೊಂದಿಗೆ ರಜತ ವಾಹನದಲ್ಲಿ ಅಲೆವೂರು ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಮರನಾಥ್ ಶೆಟ್ಟಿ, ಊರ ನಾಗರಿಕರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Next Story





