ಶಿರೂರು| ದನ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬ್ರಹ್ಮಾವರ: ಶಿರೂರು ಮೂರು ಕೈ ಪೇಟೆಯ ನೀರ್‌ಜೆಡ್ಡು ಎಂಬಲ್ಲಿ ರಸ್ತೆ ಬದಿ ದನವನ್ನು ವಾಹನದಲ್ಲಿ ಕಳವು ಮಾಡಿಕೊಂಡು ಹೋದ ಪ್ರಕರಣದ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಜಾಫಿರ್ ಹಾಗೂ ರಾಮ ನಾಯ್ಕ ಎಂದು ಗುರುತಿಸಲಾಗಿದೆ. ಮುಜಾಪಿರ್‌ನನ್ನು ಹೈಕಾಡಿ ಯಲ್ಲಿ ಹಾಗೂ ರಾಮ ನಾಯ್ಕ ನನ್ನು ನೀರುಜೆಡ್ಡುವಿನಲ್ಲಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇವರು ಜು.20ರಂದು ರಸ್ತೆಯ ಬದಿಯಲ್ಲಿದ್ದ ದನವನ್ನು ಹೊಡೆದು ಬಡಿದು ಹಗ್ಗವನ್ನು ಕಟ್ಟಿ ವಾಹನಕ್ಕೆ ತುಂಬಿಸಿಕೊಂಡು ಕಳವು ಮಾಡಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





