ಶಿರ್ವ | ದಾವಣಗೆರೆ ಮೂಲದ ಬಾಲಕ ಆತ್ಮಹತ್ಯೆ

ಶಿರ್ವ, ಡಿ.9: ದಾವಣಗೆರೆ ಮೂಲದ ಬಾಲಕನೋರ್ವ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.8ರಂದು ಬೆಳಗ್ಗೆ ಕುರ್ಕಾಲು ಗ್ರಾಮದ ಶಂಕರಪುರ ಎಂಬಲ್ಲಿ ನಡೆದಿದೆ.
ಮೃತರನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಮೂಲದ, ಕಟಪಾಡಿ ಶಂಕರಪುರ ಎಂಬಲ್ಲಿನ ಬಾಡಿಗೆ ಮನೆ ನಿವಾಸಿ, ಕೂಲಿ ಕಾರ್ಮಿಕ ಗಂಗಾರಾಮ್ ಎಂಬವರ ಮಗ ಮಂಜುನಾಥ ಜಿ(14) ಎಂದು ಗುರುತಿಸಲಾಗಿದೆ.
ತಂದೆ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮಗ ಯಾವುದೋ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕಬ್ಬಿಣದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Next Story





