ಶಿರ್ವ | ಕಾಲೇಜೊಂದರ ಹಣಕಾಸು ಅಧಿಕಾರಿ ಕಾಡಿನಲ್ಲಿ ಆತ್ಮಹತ್ಯೆ

ಉಡುಪಿ : ಮೂಡುಬಿದಿರೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಹಣಕಾಸು ಅಧಿಕಾರಿ ಆಗಿದ್ದ ವ್ಯಕ್ತಿಯೊಬ್ಬರು ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಾರ್ ಖಾನ್ ಕಾಡಿನೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕಾಪು ನಿವಾಸಿ ರಾಜೇಶ್ ನಾಯ್ಕ ಎಂದು ಗುರುತಿಸಲಾಗಿದೆ. ಇತ್ತೀಚಿಗೆ ತಾಯಿ ಅಗಲಿದ್ದ ಚಿಂತೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





