ಶಿರ್ವ| ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ 4.10 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಶಿರ್ವ, ಸೆ.20: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡಿ ಲಕ್ಷಾಂತರ ರೂ. ಆನ್‌ಲೈನ್ ಮೂಲಕ ವಂಚಿಸಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಿನೆಟ್ ಮೆಂಡೋನ್ಸ(52) ಎಂಬವರಿಗೆ ಸೆ.18ರಂದು ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್ ಬಂದಿದ್ದು, ಪೊಲೀಸ್ ಸಮವಸ್ತ್ರ ಧರಿಸಿ ಕರೆ ಮಾಡಿದ ವ್ಯಕ್ತಿ ‘ನಿಮ್ಮ ಮೇಲೆ ಕೇಸು ಇದೆ, ನಿಮ್ಮ ನಂಬರ್ ಬ್ಲಾಕ್ ಮಾಡುತ್ತೇವೆ. ಬ್ಯಾಂಕ್ ಖಾತೆಯಲ್ಲಿದ್ದ ಹಣ ಉಳಿಯಬೇಕಾದರೆ ಕೂಡಲೇ ನಾನು ತಿಳಿಸಿದ ಖಾತೆಗೆ ಹಣ ಹಾಕುವಂತೆ ಪಿಡಿಎಫ್ ಪೈಲ್ ಕಳುಹಿಸಿದ್ದನು.
ಇದರಿಂದ ಭಯಭೀತಗೊಂಡ ಲಿನೆಟ್, ಕರೆ ಮಾಡಿದ ವ್ಯಕ್ತಿ ಪೊಲೀಸ್ ಅಧಿಕಾರಿ ಆಗಿರಬೇಕೆಂದು ಭಾವಿಸಿ ಆತ ತಿಳಿಸಿದಂತೆ ತನ್ನ ಖಾತೆಯಲ್ಲಿದ್ದ 4,10,000ರೂ. ಹಣವನ್ನು ಆತ ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದರು. ಈ ಮೂಲಕ ಅಪರಿಚಿತ ವ್ಯಕ್ತಿ ಆನ್‌ಲೈನ್ ಮೂಲಕ ವಂಚಿಸಿರುವುದಾಗಿ ದೂರಲಾಗಿದೆ.
Next Story





