ಶ್ರೀಕೃಷ್ಣ ಲೀಲೋತ್ಸವ: ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿ, ಸೆ.2: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ನಿಕ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ ಕಲರ್ಸ್ ಆಫ್ ಶ್ರೀಕೃಷ್ಣ ಲೀಲೋತ್ಸವ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಬಹುಮಾನ ವಿಜೇತರಿಗೆ ಪ್ರಥಮ 10,000ರೂ., ದ್ವಿತೀಯ 5,000ರೂ., ತೃತೀಯ 3,000ರೂ. ಹಾಗು 5 ಸಮಾಧಾನಕರ ಬಹುಮಾನಗಳು, ಆಕರ್ಷಕ ಸ್ಮರಣಿಕೆ, ವಿಶೇಷ ಉಡುಗೊರೆಗಳನ್ನು ನೀಡಲಾಗುವುದು. ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು ಕಳುಹಿಸಬಹುದು. ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ 4ಎಂಬಿ ಗಿಂತ ಹೆಚ್ಚು ಮೀರಬಾರದು. ಮೊಬೈಲ್ನಲ್ಲಿ ತೆಗೆದ ಛಾಯಾಚಿತ್ರಗಳನ್ನು, ಪೋಟೋಶಾಪ್‌ನಲ್ಲಿ ತಿರುಚಲಾದ ಮತ್ತು ವಾಟರ್ ಮಾರ್ಕ್ ಇದ್ದ ಚಿತ್ರಗಳನ್ನುಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಇಮೇಲ್(salonskpagmail.com) ಮೂಲಕ ಕಳುಹಿಸುವಾಗ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸ ಬೇಕು. ಉಡುಪಿಯ ರಥಬೀದಿಯಲ್ಲಿ ಸೆ.7ರಂದು ನಡೆಯುವ ವಿಟ್ಟಪಿಂಡಿಯ ದಿನದಂದು ಸೆರೆಹಿಡಿದ ಛಾಯಾಚಿತ್ರಗಳು ಮಾತ್ರ. ನೋಂದಾಯಿಸಲು ಸೆ.5 ಕೊನೆಯ ದಿನಾಂಕ.
ನೋಂದಾಯಿಸಿದ ಎಲ್ಲಾ ಛಾಯಾಗ್ರಾಹಕರಿಗೆ ಒಂದು ಟಿ-ಶರ್ಟ್ ಉಚಿತ. ಛಾಯಾಚಿತ್ರವನ್ನು ಕಳುಹಿಸಲು ಕೊನೆಯ ದಿನಾಂಕ ಸೆ.17. ಫಲಿತಾಂಶವನ್ನು ಸೆ.30ರಂದು ಪ್ರಕಟಿಸಲಾಗುವುದು. ಟಿ-ಶರ್ಟ್ ಧರಿಸಿಯೇ ಛಾಯಾಗ್ರಹಣ ವನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಮೊ-9019573166, 72041 46368, 9448252363ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.







