ಸಿರಾಜುಸ್ಸುನ್ನ ದಶಮಾನೋತ್ಸವ: ಮುಹೀನೇ ಮಿಲ್ಲತ್ ಅವಾರ್ಡ್, ಸನ್ಮಾನ ಕಾರ್ಯಕ್ರಮ

ಪಡುಬಿದ್ರಿ: ಅಲ್‍ಹಾಜ್ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಟ ಅವರ ಶಿಷ್ಯಂದಿರ ಸಂಘಟನೆಯಾದ ಸಿರಾಜುಸ್ಸುನ್ನ ಫೌಂಡೇಶನ್ ಇದರ ದಶಮಾನೊತ್ಸವ ಕಾರ್ಯಕ್ರಮದ ಪ್ರಯುಕ್ತ ರವಿವಾರ ಹೆಜಮಾಡಿಯ ಅಲ್- ಅಝಾರ್ ಇಂಗ್ಲೀಷ್ ಮೀಡಿಮ್ ಶಾಲೆಯಲ್ಲಿ ಸಿರಾಜುಸ್ಸುನ್ನ ಮಿಈನೇ ಮಿಲ್ಲತ್ ಸ್ನೇಹ ಸಂಗಮ ನಡೆಯಿತು.
ಅಶೈಖ್ ಸಿರಾಜುದ್ದಿನ್ನಳಿಯುಲ್ಲಾಹಿ ದರ್ಗಾ ಝಿಯಾರತ್ ನಡೆಯಿತು. ಜಿ.ಎಂ. ಖಾಮಿಲ್ ಸಖಾಫಿ ಇವರಿಂದ ಅಧ್ಯಯನ ತರಗತಿ, ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಟ ವರ ಆಧ್ಯಾತ್ಮಿಕ ತರಗತಿ, ಇಲ್ಯಾಸ್ ಮದನಿ ಹಾಗೂ ಸಂಗಡಿಗರಿಂದ ಬುರ್ದಾ ಮಜ್ಲಿಸ್, ಖತಮುಲ್ ಖುರ್ ಆನ್ ಕಾರ್ಯಕ್ರಮ, ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಶೈಖುನಾ ಮುಹಮ್ಮದ್ ಮುಸ್ಲಿಯಾರ್ ಪುಂಜಾಲಕಟ್ಟೆ ಉಸ್ತಾದ್‍ರ ದುಆ ಆಶೀರ್ವಚನ ನಡೆಯಿತು.
ಅಲಲ್ ಮಫಾಝ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಪಿ.ಪಿ. ಅಹ್ಮದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕನ್ನಂಗಾರ್ ಜುಮಾ ಮಸೀದಿಯ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ ಉದ್ಘಾಟಿಸಿ ಶುಭಹಾರೈಸಿದರು.
ಪ್ರಶಸ್ತಿ ಪ್ರದಾನ, ಸನ್ಮಾನ: ಸಿರಾಜುಸ್ಸುನ್ನ ಫೌಂಡೇಶನ್ ವತಿಯಿಂದ ಚೊಚ್ಚಲ ಮುಹೀನೇ ಮಿಲ್ಲತ್ ಅವಾರ್ಡ್‍ನ್ನು ಸಾಗರದ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಎಸ್ ಮುಹಮ್ಮದ್ ಸಾಗರ ರವರಿಗೆ ಮುಹಮ್ಮದ್ ಮುಸ್ಲಿಯಾರ್ ಪುಂಜಾಲಕಟ್ಟೆ ಉಸ್ತಾದ್ ನೀಡಿ ಗೌರವಿಸಲಾಯಿತು. ಅಲ್‍ಹಾಜ್ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಟ ಅವರನ್ನು ಶಿಷ್ಯಂದಿರ ಪರವಾಗಿ ಸನ್ಮಾನಿಸಲಾಯಿತು. ಕೆಸಿಎಫ್ ದುಬೈ ವಲಯದ ಅಧ್ಯಕ್ಷ ಇಲ್ಯಾಸ್ ಮದನಿ ಕಾಶಿಪಟ್ಣ, ಎಸ್‍ಎಸ್‍ಎಫ್ ರಾಜ್ಯ ಸಾಹಿತ್ಯೋತ್ಸವದಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡದ ಮುಹಮ್ಮದ್ ನಈಮಿ ಅವರನ್ನು ಗೌರವಿಸಲಾಯಿತು.
ಕೆಇಟಿ ಕನ್ನಂಗಾರ್ ಕಾರ್ಯದರ್ಶಿ ಎಂ.ಐ. ಮುಹಮ್ಮದ್, ಕನ್ನಂಗಾರ್ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಮೊಯ್ಯುದ್ದೀನ್ ಬಿಲೀಫ್, ಎಸ್‍ವೈಎಸ್ ರಾಜ್ಯ ಕೋಶಾಧಿಕಾರಿ ಎಡ್ವಕೇಟ್ ಹಂಝತ್ ಕೋಡಿ, ಕನ್ನಂಗಾರ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಕಾಸಿಂ ಹಾಜಿ, ಡಿಕೆಎಸ್‍ಸಿಯ ಫಾರೂಕ್ ಹಾಜಿ ಕರ್ನಿರೆ, ಕೋಡಿ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್.ರಝಾಕ್, ಬಿ.ಕೆ. ಮುಹಮ್ಮದ್, ಹುಸೈನ್ ಉಸ್ತಾದ್, ಸ್ಥಳೀಯ ವಿವಿಧ ಮಸೀದಿಗಳ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್, ಅಬ್ದುಲ್ ಖಾದರ್ ಎಸ್‍ಎಸ್ ರೋಡ್, ಮುಹಮ್ಮದ್ ಇಸ್ಮಾಯಿಲ್ ಎನ್‍ಎಸ್ ರೋಡ್, ಎಂ.ಎ.ಸಯ್ಯದ್ ಅವರಾಲು ಮಟ್ಟು, ಬಶೀರ್ ಅಹ್ಮದ್, ಅಬ್ದುಲ್ ಅಝೀಝ್ ಕನ್ನಂಗಾರ್, ಎಂ.ಇ. ಅಬ್ದುಲ್ ಖಾದರ್ ಸಾಗರ, ಉಡುಪಿ ಜಿಲ್ಲಾ ಎಸ್‍ಎಸ್‍ಎಫ್ ಅಧ್ಯಕ್ಷ ಶಾಹುಲ್ ನಈಮಿ, ಕೆಡಬ್ಲ್ಯೂಎ ಜುಬೈಲ್ ಎಚ್.ಬಿ.ಇಬ್ರಾಹಿಂ, ಎಸ್‍ಎಸ್‍ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ರಖೀಬ್, ಅಬ್ದುಲ್ ಮಜೀದ್ ಮಿಹ್‍ರಾಜ್, ಮುಹಮ್ಮದ್ ಶರೀಫ್ ಕರ್ನಿರೆ, ಮುಹಮ್ಮದ್ ಶುಹೈಬ್ ಕನ್ನಂಗಾರ್, ಸಿರಾಜುಸುನ್ನ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಸಲಾಂ ಮದನಿ ಉಪಸ್ಥಿತರಿದ್ದರು.
ಹಾಫಿಳ್ ಹಾರಿಸ್ ಮದನಿ ಕನ್ನಂಗಾರ್ ಕಿರಾಅತ್ ಪಠಿಸಿದರು. ಸಿರಾಜುಸುನ್ನ ಫೌಂಡೇಶನ್ ಕಾರ್ಯದರ್ಶಿ ಮುನೀರ್ ಸಖಾಫಿ ಸ್ವಾಗತಿಸಿದರು. ದಶವಾರ್ಷಿಕ ಸ್ವಾಗತ ಸಮಿತಿಯ ಅಧ್ಯಕ್ಷ ಇಲ್ಯಾಸ್ ಮದನಿ ದುಬೈ ಪ್ರಸ್ತಾವಿಕವಾಗಿ ಮಾತನಾಡಿದರು.







