ದಲಿತನಿಗೆ ವಂಚನೆ ಪ್ರಕರಣ: ಎಸ್‌ಐಟಿ ತನಿಖೆಗೆ ಆಗ್ರಹ

ಉಡುಪಿ: ದಲಿತ ದೌರ್ಜನ್ಯ ಪ್ರಕರಣಗಳ ತನಿಖೆಗೆ ರಚನೆಯಾಗಿರುವ ಜಿಲ್ಲಾ ಮಟ್ಟದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಯ ಡಿವೈಎಸ್ಪಿ ಎಸ್.ಟಿ.ವಡೆಯಾರ್ ಇವರನ್ನು ತಕ್ಷಣ ಅಮಾನತು ಮಾಡುವಂತೆ ರಾಜ್ಯ ಗೃಸಚಿವರಿಗೆ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದಸಂಸ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ಧಾರೆ.
ನಾಗೇಶ್ ಎಂಬವರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಪಡುಬಿದ್ರಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ, ನಿರ್ದೇಶಕ, ಮೇನಜರ್ ಸೇರಿ ಸುಮಾರು 7 ಮಂದಿ ವಿರುದ್ಧ ಪಡುಬಿದ್ರಿಯ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಎಲ್ಲಾ ತನಿಖೆಯನ್ನು ಉಡುಪಿಯ ಡಿಸಿಆರ್‌ಇ ಠಾಣೆಗೆ ವರ್ಗಾಯಿಸಿದ್ದರೂ, ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಎಸ್.ಟಿ.ವಡೆಯಾರ್ ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿ ವಹಿಸಿದ್ದಾರೆ ಎಂದು ದೂರಿದ್ದಾರೆ.
ಆದುದರಿಂದ ಪ್ರಿಯದರ್ಶನಿ ಸಹಕಾರಿ ಸಹಕಾರ ಸಂಘದ ಈ ವಂಚನೆ ಪ್ರಕರಣವನ್ನು ರಾಜ್ಯ ಸರಕಾರ ತಕ್ಷಣ ಎಸ್‌ಐಟಿ ಅಥವಾ ಸಿಓಡಿಗೆ ನೀಡುವಂತೆ ದಲಿತ ಮುಖಂಡರಾರ ಗಣೇಶ್ ನೆರ್ಗಿ, ಕೃಷ್ಣ ಪಡುಬಿದ್ರಿ, ಹರೀಶ್ ಸಲ್ಯಾನ್, ವಸಂತ ಪಾದೆಬೆಟ್ಟ,ಸುಜಿತ್ ಕಂಚಿನಡ್ಕ,ರ ಲಕ್ಷ್ಮೀನಗರ, ಭಾಗವಾನ್ ಮಲ್ಪೆ, ಪ್ರಸಾದ್, ಅರುಣ್ ಸಾಲ್ಯಾನ್, ದಯಾಕರ್ ಮಲ್ಪೆ, ಬಿ.ಎನ್.ಪ್ರಶಾಂತ್,ಸುಶೀಲ್ ಕುಮಾರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.




