ಹೊಟೇಲ್‌ನಲ್ಲಿ ಇಸ್ಪೀಟು ಜುಗಾರಿ: ಆರು ಮಂದಿ ಬಂಧನ

ಕಾರ್ಕಳ, ಆ.4: ನಿಟ್ಟೆ ಗ್ರಾಮದ ಹೊಟೇಲ್ ಸನ್ಮಾನ್ ರೆಸಿಡೆಸ್ಸಿಯಲ್ಲಿ ಆ.4ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸುಜೀತ್, ಅಭಿಮನ್ಯು, ಮಹೇಶ, ಧೀರಜ್, ನರೇಶ್ ಕುಮಾರ್, ಪ್ರಶಾಂತ ಬಂಧಿತ ಆರೋಪಿಗಳು. ಪೊಲೀಸ್ ದಾಳಿ ವೇಳೆ ಯಶೋದರ (ಅಣ್ಣು), ನೂರು ಮಹಮ್ಮದ್, ರವಿಶೆಟ್ಟಿ, ಸತೀಶ್ ಎಂಬವರು ಪರಾರಿಯಾಗಿದ್ದಾರೆ.
ಆರೋಪಿಗಳಿಂದ 16,350ರೂ. ನಗದು, ಇಸ್ಪೀಟ್ ಎಲೆಗಳು, ಹಾಗೂ 17,000 ರೂ. ಮೌಲ್ಯದ ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ತಲೆಮರಿಸಿಕೊಂಡಿದ್ದ ಆರೋಪಿಗಳು ಮತ್ತು ಜುಗಾರಿ ಆಡುವ ಅವಕಾಶ ಮಾಡಿಕೊಟ್ಟ ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆಸ್ಸಿಯ ಮಾಲಕರಿ ಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story




