Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಸೆಲ್ಕೋದಿಂದ ಆಫ್ರಿಕನ್ ದೇಶಗಳಿಗೆ...

ಸೆಲ್ಕೋದಿಂದ ಆಫ್ರಿಕನ್ ದೇಶಗಳಿಗೆ ಸೌರವಿದ್ಯುತ್ ಕಾರ್ಯಾಗಾರ

ವಾರ್ತಾಭಾರತಿವಾರ್ತಾಭಾರತಿ22 Sept 2023 9:25 PM IST
share
ಸೆಲ್ಕೋದಿಂದ ಆಫ್ರಿಕನ್ ದೇಶಗಳಿಗೆ ಸೌರವಿದ್ಯುತ್ ಕಾರ್ಯಾಗಾರ

ಉಡುಪಿ, ಸೆ.22: ತಂತ್ರಜ್ಞಾನ ಹಾಗೂ ಸೌರವಿದ್ಯುತ್ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಗಿಂತ ಸುಮಾರು ಎರಡು ದಶಕಗಳಷ್ಟು ಹಿಂದಿರುವ ಮೂರು ಆಫ್ರಿಕನ್ ದೇಶಗಳಾದ ಇಥಿಯೋಪಿಯಾ, ಸಿಯೆರಾ ಲಿಯೋನ್ ಹಾಗೂ ತಾಂಜೆನಿಯಾ ದೇಶಗಳ 11 ಸೌರ ಶಕ್ತಿ ಆಧಾರಿತ ಉದ್ಯಮಸಂಸ್ಥೆಗಳ ಅಧಿಕಾರಿಗಳಿಗೆ ಭಾರತದ ಸೆಲ್ಕೋ ಫೌಂಡೇಷನ್ ಹತ್ತು ದಿನಗಳ ಉದ್ಯಮ ಆಧಾರಿತ ಕಾರ್ಯಾಗಾರವನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಆವರಣದಲ್ಲಿ ಹಮ್ಮಿಕೊಂಡಿದೆ.

ಸೆಲ್ಕೋ ಫೌಂಡೇಶನ್ ಮತ್ತು ಗ್ಲೋಬಲ್ ಎಸ್‌ಡಿಜಿ 7 ಹಬ್ಸ್ ಜಂಟಿಯಾಗಿ ಈ 10 ದಿನಗಳ ಉದ್ಯಮ ಆಧಾರಿತ ತರ ಬೇತಿ, ನೆಟ್‌ವರ್ಕಿಂಗ್ ಮತ್ತು ಸ್ಥಳೀಯವಾಗಿರುವ ಸೆಲ್ಕೋದ ಪ್ರಯೋಗತಾಣಗಳಿಗೆ ಭೇಟಿ ಕಾರ್ಯಕ್ರಮಗಳು ಈ ಅವಧಿ ಯಲ್ಲಿ ನಡೆಯಲಿವೆ. ಮೂರು ದೇಶಗಳ 11 ಸೌರಶಕ್ತಿ ಆಧಾರಿತ ಕಂಪೆನಿಗಳ 30ಕ್ಕೂ ಅಧಿಕ ಮಂದಿ ತಂತ್ರಜ್ಞರು ಇದರಲ್ಲಿ ಪಾಲ್ಗೊಂಡಿದ್ದಾರೆ.

ಗ್ಲೋಬಲ್ ಎಸ್‌ಡಿಜಿ 7 ಹಬ್ಸ್ ಹಿಂದುಳಿದ ದೇಶಗಳಲ್ಲಿ ಸುಸ್ಥಿರ ಇಂಧನ ತಂತ್ರಜ್ಞಾನದ ಅಳವಡಿಕೆ ಮೂಲಕ ಹಿಂದುಳಿದ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಭಾರತದಲ್ಲಿ ಸೌರವಿದ್ಯುತ್ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿ ಅನುಭವ ಹೊಂದಿರುವ ಸೆಲ್ಕೋ ಫೌಂಡೇಷನ್‌ನ ನೆರವಿನಿಂದ ತಂತ್ರಜ್ಞಾನ ಜ್ಞಾನಗಳ ವಿನಿಮಯ, ಸಾಮರ್ಥ್ಯ ಬೆಳವಣಿಗೆ ಹಾಗೂ ಅನುಷ್ಠಾನದ ಮೂಲಕ ವೇಗವರ್ಧಕವಾಗಿ ಕೆಲಸ ಮಾಡುತ್ತಿದೆ. ಇದರ ಸಹಾಯದಿಂದ ಅರೋಗ್ಯ, ಜೀವನೋಪಾಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಆ ದೇಶಗಳ ಪ್ರಗತಿ ಸಾಧಿಸಲು ಉತ್ತೇಜನ ನೀಡುತ್ತಿದೆ ಎಂದು ಸೆಲ್ಕೋದ ಸೀನಿಯರ್ ಪ್ರೋಗ್ರಾಮ್ ಅಧಿಕಾರಿ ಪ್ರಶಾಂತ್ ತಿಳಿಸಿದರು.

ಭಾರತ ಮತ್ತು ಆಫ್ರಿಕಾದ ನಡುವೆ ಸೌರ ಶಕ್ತಿ ಆಧಾರಿತ ಉದ್ಯಮ ಮತ್ತು ವ್ಯಾಪಾರದ ವಿನಿಮಯವನ್ನು ಹೆಚ್ಚಿಸುವ ಗುರಿ ಯನ್ನು ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಭಾರತ ಮತ್ತು ಆಫ್ರಿಕಾದ ಇಂಧನ ಆಧಾರಿತ ಉದ್ಯಮಗಳಿಂದ ಅನೇಕ ವಾಣಿಜ್ಯೋದ್ಯಮಿಗಳು ಭೇಟಿ ಮಾಡಿ ಶುದ್ಧ ಇಂಧನ ಸಂಬಂಧಿತ ಅನುಭವಗಳ ವಿನಿಮಯ ಮಾಡಿಕೊಳ್ಳುತಿದ್ದಾರೆ. ಪರಸ್ಪರ ವಿನಿಮಯದ ಮೂಲಕ ಸಂಭಾವ್ಯ ಪಾಲುದಾರಿಕೆಯನ್ನು ಸೃಷ್ಟಿಸುವ ಉದ್ದೇಶವೂ ಇದೆ ಎಂದರು.

ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಇಥಿಯೋಪಿಯಾದ ಲಿಮಿ ಅಶಿಫಾ ಮೊಚಾ, ತಾರಿಕು ಲಿಮಿ ತೂಲ್ಸಾ, ಅಬೆಲ್ ಜೆರ್ಫೂ, ತಾಂಜಾನಿಯಾದ ಸಿಲಾಯೋ ಆನೆಸ್ಟ್ ಮಥಾಯಸ್, ಸೆಲಿಮನ್ ಅಬ್ದುಲ್ಲಝೀಝ್ ರಶೀದ್ ಹಾಗೂ ಸಿಯೆರಾ ಲಿಯೋನ್‌ನ ಪ್ಯಾಟ್ರಿಕ್ ಮುಹಮ್ಮದ್ ಕಮರಾ, ಅಬ್ದುಲ್ ರಝಾಕ್ ಕೊಂಟೆಕ್, ಯೂಸಿಫ್ ಕಮರಾ ಭಾಗವಹಿಸಿ ತಮ್ಮ ದೇಶದ ಸ್ಥಿತಿ-ಗತಿಗಳ ಮಾಹಿತಿ ನೀಡಿದರು.

14 ಪಿಎಚ್‌ಸಿಗಳು ಸಂಪೂರ್ಣ ಸೋಲಾರ್

ಜಿಲ್ಲೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೆಲ್ಕೋ ಈಗಾಗಲೇ 14 ಪಿಎಚ್‌ಸಿ ಗಳಲ್ಲಿ ಸಂಪೂರ್ಣ ಸೋಲಾರ್ ವಿದ್ಯುತ್‌ನ್ನು ಅಳವಡಿಸಿದೆ. ಹಾಗೂ 11 ಪಿಎಚ್‌ಸಿಗಳಲ್ಲಿ ಸೋಲಾರ್ ಅಳವಡಿಸುವ ಕಾರ್ಯ ಈ ತಿಂಗಳು ಮುಕ್ತಾಯ ಗೊಳ್ಳಲಿದೆ ಎಂದು ಸೆಲ್ಕೊದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

ಇಲಾಖೆ ಹಸಿರು ನಿಶಾನೆ ತೋರಿಸಿದರೆ ಮುಂದಿನ ಅಕ್ಟೋಬರ್ ಒಳಗೆ ಇನ್ನುಳಿದ 36 ಪಿಎಚ್‌ಸಿಗಳನ್ನು ಸಂಪೂರ್ಣ ಸೋಲಾರ್ ವ್ಯವಸ್ಥೆಯಡಿ ತರಲಾಗುವುದು ಎಂದವರು ತಿಳಿಸಿದರು. ಇದರಿಂದ ಪ್ರತಿ ಪಿಎಚ್‌ಸಿಯ ತಿಂಗಳ ವಿದ್ಯುತ್ ಬಿಲ್‌ನಲ್ಲಿ 4000ದಿಂದ 5000ರೂ. ಉಳಿತಾಯವಾಗಲಿದೆ ಎಂದು ಗುರುಪ್ರಕಾಶ್ ಶೆಟ್ಟಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X