ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟ| ಫೆ.21ಕ್ಕೆ ಮಹಿಳೆಯರ ಸಮಾವೇಶ

ಉಡುಪಿ, ಫೆ.19: ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ 5ನೇ ಕರ್ನಾಟಕ ರಾಜ್ಯ ಎಲ್ಲೈಸಿ ದುಡಿಯುವ ಮಹಿಳೆಯರ ಸಮಾವೇಶವು ಉಡುಪಿ ನಗರದ ಲಿಕೋ ಬ್ಯಾಂಕ್‌ನ ವಜ್ರಮಹೋತ್ಸವ ಕಟ್ಟಡದಲ್ಲಿ ಫೆ.21ರಂದು ನಡೆಯಲಿದೆ.
ಸಮಾವೇಶವನ್ನು ಕನ್ನಡ ಲೇಖಕಿ, ಕವಿ ಮತ್ತು ಪ್ರಗತಿಪರ ಶಿಕ್ಷಣ ತಜ್ಞರಾಗಿರುವ ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ವಿನಯ ಒಕ್ಕುಂದ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ.ಎನ್. ರವೀಂದ್ರನಾಥ್, ಜತೆ ಕಾರ್ಯದರ್ಶಿ ಕೆ ಗೋಪಾಲ್ ಹಾಗೂ ಉಪಾಧ್ಯಕ್ಷ ಎಂ. ರವಿ ಅಲ್ಲದೇ ರಾಜ್ಯ ಮಹಿಳಾ ಉಪ ಸಮಿತಿ ಸಂಚಾಲಕಿ ಎಚ್.ಆರ್. ಗಾಯತ್ರಿ ಉಪಸ್ಥಿತರಿರುವರು. ದಕ್ಷಿಣ ಮಧ್ಯ ವಲಯ ವಿಮಾ ನೌಕರ ಒಕ್ಕೂಟದ ಅಧ್ಯಕ್ಷ ಪಿ ಸತೀಶ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ಕರ್ನಾಟಕದ ಭಾರತೀಯ ಜೀವವಿಮಾ ನಿಗಮದ ಎಂಟು ವಿಭಾಗಗಳಿಂದ ಸುಮಾರು 200 ಮಹಿಳಾ ಪ್ರತಿನಿಧಿಗಳು ಹಾಗೂ ಸಹೋದರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.




