ಆ.14,17ಕ್ಕೆ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

ಉಡುಪಿ, ಆ.6: ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬೆಂಗಳೂರಿನ ಯಶವಂತಪುರ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲೊಂದನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ರೈಲು ನಂ.06541 ಯಶವಂತಪುರ- ಮಡಗಾಂವ್ ಜಂಕ್ಷನ್ ವಿಶೇಷ ರೈಲು ಆಗಸ್ಟ್ 14ರ ಗುರುವಾರದಂದು ರಾತ್ರಿ 11:55ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಅಂದರೆ ಶುಕ್ರವಾರ ಸಂಜೆ 6:05ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.
ಅದೇ ರೀತಿ ರೈಲು ನಂ.06542 ಮಡಗಾಂವ್ ಜಂಕ್ಷನ್- ಯಶವಂತಪುರ ವಿಶೇಷ ರೈಲು ಆ.17ರ ರವಿವಾರ ರಾತ್ರಿ 10:15ಕ್ಕೆ ಮಡಗಾಂವ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಸೋಮವಾರ ಸಂಜೆ 4:30ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.
ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್, ಅಂಕೋಲ ಹಾಗೂ ಕಾರವಾರಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲು 12 ಸ್ಲೀಪರ್ ಕೋಚ್, ಜನರಲ್ 4 ಹಾಗೂ ಎಸ್‌ಎಲ್‌ಆರ್-2 ಸೇರಿ ಒಟ್ಟು 18 ಕೋಚ್‌ಗಳನ್ನು ಹೊಂದಿರುತ್ತದೆ.
ರೈಲು ನಂ.06542ಕ್ಕೆ ಮುಂಗಡ ಬುಕ್ಕಿಂಗ್ ಗುರುವಾರ ತೆರೆಯಲಿದ್ದು, ಎಲ್ಲಾ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ (ಪಿಆರ್‌ಎಸ್), ಇಂಟರ್‌ನೆಟ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.







