ಹಿರಿಯಡಕ ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರ

ಹಿರಿಯಡ್ಕ, ಆ.5: ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ, ಉದ್ಯೋಗ ಮಾಹಿತಿ ಘಟಕ, ಮತ್ತು ಪ್ರೇರಣಾ ಘಟಕಗಳು ಉನ್ನತಿಯು ನೆಕ್ಟ್ಸ್ ಸಹಯೋಗದೊಂದಿಗೆ ಹಮ್ಮಿಕೊಂಡ ‘ಉನ್ನತಿ ಔದ್ಯೋಗಿಕ -ಜೀವನ ಕೌಶಲ್ಯ’ ಒಂದು ತಿಂಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉನ್ನತಿಯು ನೆಕ್ಟ್ಸ್ ಫೌಂಡೇಶನ್‌ನ ತರಬೇತು ದಾರ ಗುರುಪ್ರಸಾದ್ ಭಟ್ ತರಬೇತಿಯ ರೂಪುರೇಷೆಗಳನ್ನು ಪರಿಚಯಿಸಿ ದರು. ಉನ್ನತಿ ಮತ್ತು ಉದ್ಯೋಗ ಮಾಹಿತಿ ಘಟಕದ ಸಂಚಾಲಕಿ ಅಪರ್ಣ ಕೆ.ಯು. ಸ್ವಾಗತಿಸಿದರು. ಪ್ರೇರಣಾ ಸಂಚಾಲಕಿ ಮೀನಾಕ್ಷಿ ನಾಯ್ಕ ವಂದಿಸಿದರು.
Next Story





