ರಾಜ್ಯಮಟ್ಟದ ದಫ್ ಸ್ಪರ್ಧೆ: ಕಾಪು ಪೊಲಿಪು ತಂಡ ಚಾಂಪಿಯನ್

ಉಡುಪಿ, ನ.8: ಪುತ್ತೂರಿನ ಪುಣಚ ಪರಿಯಾಲ್ತಡ್ಕ ರಿಫಾಯಿ ದಫ್ ಕಮಿಟಿಯ 54ನೇ ವಾರ್ಷಿಕ ಹಾಗೂ ಬದ್ರಿಯಾ ಯಂಗ್ಬಾಯ್ಸ್ನ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ದಫ್ ಸ್ಪರ್ಧೆಯಲ್ಲಿ ಕಾಪು ಪೊಲಿಪುವಿನ ಸಯ್ಯದ್ ಶಂಸುದ್ದೀನ್ ವಲಿಯುಲ್ಲಾಹಿ ದಫ್ ತಂಡ ಚಾಂಪಿಯನ್ಆಗಿ ಮೂಡಿಬಂದಿದೆ.
ಅದೇ ರೀತಿ ಪೊಲಿಪು ತಂಡವು ಅತ್ಯುತ್ತಮ ಗಾಯನ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಈ ದಫ್ ಸ್ಪರ್ಧೆಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದು, ದ್ವಿತೀಯ ಬಹುಮಾನವನ್ನು ತಾಜುಲ್ ಹುದಾ ದಫ್ ಸಮಿತಿ ರೆಂಜಾಡಿ ತಂಡ ತನ್ನದಾಗಿಸಿದರೆ, ತೃತೀಯ ಬಹುಮಾನವನ್ನು ಅಲ್ ಜಝೀರ ದಫ್ ಸಮಿತಿ ಅಕ್ಕರಕೆರೆ ಉಳ್ಳಾಲ ತಂಡ ಪಡೆದುಕೊಂಡಿದೆ.
Next Story




