ಸದೃಢ ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ ಸದಾ ಮುಂದಾಗಬೇಕು : ರಂಗಪ್ಪ ಹುಲಿಯಪ್ಪ ಆಲೂರು

ಕಾರ್ಕಳ : ಭಾರತೀಯ ಸೇನೆಗೆ ಸೇರುವುದೇ ಪುಣ್ಯದ ಕೆಲಸ. ಏಳು ಏಳು ಜನ್ಮದಲ್ಲೂ ಸಹ ನಾನು ಭಾರತೀಯ ಸೈನಿಕನಾಗಿ ಸೇವೆ ಮಾಡಲು ಸಿದ್ಧ ಎಂದು ಕಾರ್ಗಿಲ್ ಯೋಧ ಹಾಗೂ ಮಾಜಿ ಸೈನಿಕ ಶ್ರೀ ರಂಗಪ್ಪ ಹುಲಿಯಪ್ಪ ಆಲೂರು ಹೇಳಿದರು.
ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳು ಹಾಗೂ ರೋಟರಿ ಕ್ಲಬ್ ಕಾರ್ಕಳ ಮತ್ತು ಇಂಟರಾಕ್ಟ್ ಕ್ಲಬ್ ಇವರ ಸಹಯೋಗದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಚಿತ್ರಣವನ್ನು ವಿದ್ಯಾರ್ಥಿಗಳ ಮುಂದಿಟ್ಟ ಅವರು ತನ್ನ ಸೇನಾ ಅನುಭವಗಳನ್ನು ಮೆಲಕು ಹಾಕಿ ಸದೃಢ ಯುವಕರು ಭಾರತದ ಸೇವೆ ಮಾಡಲು ಸೈನ್ಯ ಸೇರುವಂತೆ ಹಾಗೂ ದೇಶ ಸೇವೆ ಸಲ್ಲಿಸಲು ಸದಾ ಮುಂದಾಗಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿಕೊಂಡ ಮಾಜಿ ಭೂಸೇನೆಯ ಯೋಧ ಹಾಗೂ ಕರ್ನಾಟಕ ಸರ್ಕಾರದ ನಿಕಟ ಪೂರ್ವ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ದ ಸನ್ನಿವೇಶದ ವಿಡಿಯೋ ತುಣುಕುಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಗಿಲ್ ಯೋಧ ಹಾಗೂ ಮಾಜಿ ಸೈನಿಕ ರಂಗಪ್ಪ ಹುಲಿಯಪ್ಪ ಆಲೂರು ಇವರಿಗೆ ಸನ್ಮಾನಿಸಲಾಯಿತು. ಎಸ್. ವಿ. ಟಿ. ವಿದ್ಯಾಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು,ಶಿಕ್ಷಕರು, ಶಿಕ್ಷಕೇತರ ವೃಂದ, ಹಾಗೂ ರೋಟರಿ ಕ್ಲಬ್ ವತಿಯಿಂದ ಸಂಗ್ರಹಿಸಿದ ನಿಧಿಯನ್ನು ಈ ಸಂದರ್ಭದಲ್ಲಿ ಹಸ್ತಂತರಿಸಲಾಯಿತು.ಜೊತೆಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಾಗೂ ಯೋಧ ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಿಯಪ್ಪ ಅವರು ಉಪಸ್ಥಿತರಿದ್ದು, ತನ್ನ ಸೇನಾ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಇಂಟರ್ ಆಕ್ಟ್ ಕ್ಲಬ್ ಅಧ್ಯಕ್ಷೆ | ಕು | ವೀಶ್ವರಿ, ಎಸ್ ವಿ ಟಿ ವಿದ್ಯಾ ಸಂಸ್ಥೆಗಳ ಎಲ್ಲಾ ವಿಭಾಗದ ಮುಖ್ಯಸ್ಥರುಗಳಾದ ನೇಮಿರಾಜ್ ಶೆಟ್ಟಿ, ಯೋಗೇಂದ್ರ ನಾಯಕ್, ಗೀತಾ.ಜಿ. ಮಾಲಿನಿ.ಕೆ, ಹನುಮಂತ ಗುರುವಪ್ಪ ಬಂಡಿವಡ್ಡರ್ ಉಪಸ್ಥಿತರಿದ್ದರು.
ಎಸ್. ವಿ.ಟಿ. ಪ್ರೌಢಶಾಲೆ ವಿಭಾಗದ ಕನ್ನಡ ಅಧ್ಯಾಪಕರಾದ ದೇವದಾಸ್ ಕೆರೆಮನೆ ನಿರೂಪಿಸಿ, ಪದವಿ ಪೂರ್ವ ವಿಭಾಗದ ಕನ್ನಡ ಭಾಷಾ ಉಪನ್ಯಾಸಕರಾದ ಶ್ರೀ ಪದ್ಮಪ್ರಭ ಇಂದ್ರ ಸ್ವಾಗತಿಸಿ, ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಪ್ರಭಾ ಭೋವಿ ವಂದಿಸಿದರು.







