ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ಪ್ರದೀಪ್ ಆರ್.

ಕಾರ್ಕಳ: ಕೆ.ಎಮ್.ಇ.ಎಸ್ ವಿದ್ಯಾಸಂಸ್ಥೆ ಜಗತ್ತಿನಾದ್ಯಾಂತ ಹಲವಾರು ಗಣ್ಯ ವ್ಯಕ್ತಿಗಳನ್ನು ನೀಡಿದೆ. ಕರಾವಳಿಯ ವಿದ್ಯಾರ್ಥಿಗಳು ಐ.ಎ.ಎಸ್, ಕೆ.ಎ. ಎಸ್ ನಂತಹ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರೆಯಬೇಕು. ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳಾಗಬೇಕು ಎಂದು ಕಾರ್ಕಳದ ತಹಶೀಲ್ದಾರ್ ಪ್ರದೀಪ್. ಆರ್. ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಕುಕ್ಕುಂದೂರು "ಕೆ.ಎಮ್. ಇ. ಎಸ್ ವಿದ್ಯಾ ಸಂಸ್ಥೆಯ 42ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಪಿ.ಆರ್. ಒ. ಜ್ಯೋತಿ ಪದ್ಮನಾಭ ಭಂಡಿಯವರು ಮಾತನಾಡುತ್ತಾ ಈ ಸಂಸ್ಥೆಯಲ್ಲಿ ತಾನು ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡರು.
ಸ್ಥಳೀಯ ಶಿರ್ಡಿ ಸಾಯಿ ಬಾಬಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಆಶೀಶ್ ಶೆಟ್ಟಿಯವರು ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆ ತನ್ನ ವೈಯಕ್ತಿಕ ಬೆಳವಣಿಗೆಯನ್ನು ಯಾವ ರೀತಿ ಉಂಟು ಮಾಡಲು ಸಹಕರಿಸಿತು ಎಂಬುದರ ಬಗ್ಗೆ ಮಾತನಾಡಿದರು.
ಮತ್ತೋರ್ವ ಮುಖ್ಯ ಅತಿಥಿ ಮತ್ತು ಸಂಸ್ಥೆಯ ಪೂರ್ವ ವಿದ್ಯಾರ್ಥಿನಿ ಡಾ. ಆಶಿತಾ ಕೃಷ್ಣರವರು ಸಂಸ್ಥೆಯಲ್ಲಿ ತಾನು ಬೆಳೆದು ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು.
ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿಯವರು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃ ಷ್ಣ ರಾವ್ ರವರು ವರದಿ ವಾಚನ ಮಾಡಿದರು.
ಸಂಸ್ಥೆಯ ಅಧ್ಯಕ್ಷರಾಗಿರುವ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರು ಪ್ರಾಸ್ತವಿಕ ಭಾಷಣ ಮಾಡಿದರು.
ಅಂತರಾಷ್ಟ್ರೀಯ ಮಟ್ಟದ ಟೊಕ್ಟೆಂಡೋ ಕ್ರೀಡಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುವ ವಿದ್ಯಾರ್ಥಿ ಸನ್ಪಿತ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯಲ್ಲಿ ಇಪ್ಪತ್ತೈದು ವರ್ಷ ಸೇವೆಗೈದ ಶಿಕ್ಷಕಿ ಹೀಲ್ಡಾ ಡಿ' ಸೋಜ, ಕಾಲೇಜಿನ ಪರಿಚಾರಿಕೆ ಲೀಲಾವತಿ ಮೊದಲಾದವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೊಹಮ್ಮದ್ ನವಾಲ್ ರವರು ಧನ್ಯವಾದಗೈದರು.
ಶಿಕ್ಷಕಿ ನಳಿನಿ ಆಚಾರ್ಯರವರು ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.







