ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು: ಡಾ.ಗಣೇಶ್ ನಾಯಕ್

ಉಡುಪಿ: ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ ಮೇಲಿನ ಅಭಿರುಚಿ ವಿದ್ಯಾರ್ಥಿಗಳಿಗೆ ಇದ್ದರೆ ಮಾತ್ರ ನಮ್ಮ ನಾಡಿನ ಭಾಷೆ ಉಳಿಯಲು ಸಾಧ್ಯ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಕೇವಲ ಸಂಘ, ಸಂಸ್ಥೆಗಳ ಕಾರ್ಯ ಎಂದು ಭಾಸದೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಮಾಜ ಕಾರ್ಯ ಉಪನ್ಯಾಸಕ ಮತ್ತು ಬರಹಗಾರ ಡಾ.ಗಣೇಶ್ ಪ್ರಸಾದ್ ನಾಯಕ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಮತ್ತು ಡಾ.ಜಿ.ಶಂಕರ್ ಸರಕಾರಿ ಮಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ’ಕನ್ನಡ ಡಿಂಡಿಮ’ ಪ್ರಯುಕ್ತ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ಮತ್ತು ಯುವ ಪ್ರತಿಭೆಗಳಿಗೆ ನನ್ನ ನೆಚ್ಚಿನ ಸಾಹಿತಿ, ಆಶುಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ಡಾ.ಶಿವರಾಮ ಕಾರಂತರು ಮತ್ತು ಅವರ ಚಿಂತನೆಗಳು ಉಡುಪಿ, ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗಬಾರದು. ಕಾರಂತರು ಕನ್ನಡದ ಆಸ್ತಿ, ರಾಜ್ಯದ ಉದ್ದಗಲಕ್ಕೂ ಅವರ ಚಿಂತನೆಗಳು ತಲುಪಬೇಕಾಗಿದೆ ಎಂಬ ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಜನ್ ಕೆ.ಜಿ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ಶ್ರೀಮತಿ ಅಡಿಗ ಮತ್ತು ಡಾ.ಶಿವರಾಮ ಕಾರಂತ ಟ್ರಸ್ಟ್ ಸದಸ್ಯರಾದ ಜಿ.ಎಂ.ಶರೀಫ್ ಹೂಡೆ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನ ಸ್ವಾಗತಿಸಿದರು. ಕನ್ನಡ ಭಾಗದ ಪ್ರಾಧ್ಯಪಕ ಡಾ.ಪ್ರಸನ್ನ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಸದಸ್ಯ ಸತೀಶ್ ಕೊಡವೂರು ವಂದಿಸಿದರು.







