ಕುಂದಾಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಲೈಮಾನ್ ಬ್ಯಾರಿಗೆ ಸನ್ಮಾನ

ಕುಂದಾಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಲೈಮಾನ್ ಮುಹಮ್ಮದ್ ಬ್ಯಾರಿ ಗುಲ್ವಾಡಿ ಅವರನ್ನು ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಬು ಮೊಹಮ್ಮದ್, ಹಿರಿಯರು ಮಾಜಿ ಅಧ್ಯಕ್ಷ ಶೇಕ್ ಅಬು ಮುಹಮ್ಮದ್, ಜಾಮಿಯಾ ಮಸೀದಿಯ ಕಾರ್ಯದರ್ಶಿ ತಬ್ರೇಜ್, ಕುಂದಾಪುರ ತಾಲೂಕು ಘಟಕದ ಪದಾಧಿಕಾರಿಗಳಾದ ಮೊಹಮ್ಮದ್ ಅಲಿ, ಕೋಡಿ ಶಹಬಾನ್ ಹಂಗಳೂರು, ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು, ಫಝಲ್ ಮೌಲಾನ ಕಂಡ್ಲೂರು, ಅಯೂಬ್ ಮೌಲಾನ ಕುಂದಾಪುರ, ಖತೀಬ್ ಅಶ್ಪಾಕ್, ರಜಾಕ್ ಬಿಜಾಡಿ, ರಿಯಾಜ್ ಕೋಡಿ, ಜಮಾಲ್ ಗುಲ್ವಾಡಿ ಅಲ್ಫಾಜ್, ಅಶ್ಫಾಕ್ ಮೂಡುಗೋಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





