ಉಡುಪಿ ಜಿಲ್ಲೆಯಲ್ಲಿ ಅರ್ಧದಷ್ಟು ಮನೆಗಳ ಸಮೀಕ್ಷೆ ಪೂರ್ಣ: ಬೈಂದೂರಿನಲ್ಲಿ ಅತ್ಯಧಿಕ, ಉಡುಪಿಯಲ್ಲಿ ಕನಿಷ್ಠ ಗಣತಿ

ಉಡುಪಿ, ಅ.4: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿ ರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ 13ನೇ ದಿನವಾದ ಇಂದು ಉಡುಪಿ ಜಿಲ್ಲೆಯ ಒಟ್ಟು ಗುರಿಯಲ್ಲಿ ಅರ್ಧದಷ್ಟು ಮನೆಗಳ ಗಣತಿಯನ್ನು ಪೂರ್ಣಗೊಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 3,57,936 ಮನೆಗಳ ಗಣತಿ ನಡೆಯ ಬೇಕಾಗಿದ್ದು, ಇಂದು ಸಂಜೆಯವರೆಗೆ ಒಟ್ಟು 1,82,643 ಮನೆಗಳ ಗಣತಿ ಮುಗಿಸಿ ಶೇ.51.03ರಷ್ಟು ಸಾಧನೆ ಮಾಡಲಾಗಿದೆ. 13ನೇ ದಿನವಾದ ಇಂದು ಒಟ್ಟು 23,514 ಮನೆಗಳ ಜನರ ಗಣತಿಯನ್ನು ಸಮೀಕ್ಷೆಗಾರರು ಮಾಡಿ ಮುಗಿಸಿದ್ದಾರೆ.
ಸೆ.22ರಿಂದ ಅ.7ರವರೆಗೆ ನಡೆಯಲು ನಿಗದಿಯಾಗಿರುವ ಸಮೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಇದುವರೆಗಿನ ಸಾಧನೆ ಯನ್ನು ಗಮನಿಸಿದರೆ, ಬೈಂದೂರು ತಾಲೂಕಿನಲ್ಲಿ ಅತ್ಯಧಿಕ ಅಂದರೆ 73.89 ಮನೆಗಳ ಗಣತಿಯನ್ನು ಪೂರ್ಣ ಗೊಳಿಸಲಾಗಿದೆ. ಕನಿಷ್ಠ ಗಣತಿ ನಡೆದಿರುವುದು ಉಡುಪಿ ತಾಲೂಕಿ ನಲ್ಲಿ. ಇಲ್ಲಿ ಶನಿವಾರ ಸಂಜೆಯವರೆಗೆ ಕೇವಲ 28.29 ಮನೆಗಳ ಸರ್ವೆಯನ್ನು ಮಾಡಿ ಮುಗಿಸಲಾಗಿದೆ ಎಂದು ಜಿಲ್ಲಾಡಳಿತ ನೀಡಿರುವ ಮಾಹಿತಿ ತಿಳಿಸಿದೆ.
ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡು ಸಮೀಕ್ಷೆಗೆ ಬಾರದ ನಾಲ್ವರು ಶಿಕ್ಷಕರನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಈಗಾಗಲೇ ಅಮಾನತುಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3239 ಮಂದಿ ಗಣತಿದಾರರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನದ ಗುರಿ 29,791 ಮನೆಗಳಾಗಿವೆ.ಮೊದಲ ನಾಲ್ಕು ದಿನ ಗಣತಿ ಕಾರ್ಯ ವಿವಿಧ ಕಾರಣಗಳಿಂದ ನಡೆಯದ ಕಾರಣ ಗುರಿ ಮುಟ್ಟಲು ಇಂದು 80,920 ಮನೆಗಳ ಗಣತಿ ಮುಗಿಸಬೇಕಿತ್ತು.
ಶನಿವಾರದವರೆಗೆ ತಾಲೂಕುವಾರು ನಡೆದ ಸಮೀಕ್ಷೆಯ ಸಂಪೂರ್ಣ ವಿವರ ಹೀಗಿದೆ.
ತಾಲೂಕು, ಒಟ್ಟು ಕುಟುಂಬಗಳು, ಬ್ಲಾಕ್‌ಗಳು, ಇಂದು ಪೂರ್ಣಗೊಂಡ ಮನೆ, ಸಮೀಕ್ಷೆ ಪೂರ್ಣಗೊಂಡ ಮನೆಗಳ ವಿವರ, ಶೇಕಡ)
ಉಡುಪಿ 97,812 844 4965 27,668 28.29
ಕುಂದಾಪುರ 65,939 621 5135 39,260 59.54
ಕಾರ್ಕಳ 58,050 531 3910 32,191 55.45
ಕಾಪು 45,274 403 3296 20,810 45.96
ಹೆಬ್ರಿ 13,236 121 0728 09,546 72.12
ಬ್ರಹ್ಮಾವರ 51,428 465 3363 33,812 65.75
ಬೈಂದೂರು 26,197 246 2117 19,356 73.89
ಒಟ್ಟು 357936 3231 23514 182643 51.03







