ಕುಂದಾಪುರ: ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮ

ಕುಂದಾಪುರ: ಕುಂದಾಪುರ ಪತಂಜಲಿ ಯೋಗ ಸಮಿತಿ ಮತ್ತು ಕುಂದಾಪುರ ತಾಲೂಕು ಕ್ರೀಡಾ ಭಾರತಿಯ ಜಂಟಿ ಆಶ್ರಯದಲ್ಲಿ ರಥ ಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮ ಕುಂದಾಪುರ ಶ್ರೀಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ವಿದ್ವಾನ್ ಚಂದ್ರಶೇಖರ ಅಡಿಗರು ಆದಿತ್ಯ ಹೃದಯ ಮಹಾಯಜ್ಞವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು. ಉಡುಪಿ ಜಿಲ್ಲಾ ಕ್ರೀಡಾ ಭಾರತಿಯ ಜಿಲ್ಲಾಧ್ಯಕ್ಷ ಮಂಜುನಾಥ ಶೆಟ್ಟಿ, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ವಿವೇಕ್ ಪೈ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಂಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತತ 18 ವರ್ಷಗಳಿಂದ ಯೋಗಾರ್ಥಿಗಳಾಗಿ ಭಾಗವಹಿಸಿದ ಹಿರಿಯರನ್ನು ಗೌರವಿಸಲಾಯಿತು. ವಿಭಾಗ ಸಂಯೋಜಕ ಪ್ರಸನ್ನ ಶೆಣೈ, ಉಡುಪಿ ಜಿಲ್ಲಾ ಕ್ರೀಡಾ ಭಾರತಿಯ ಕಾರ್ಯದರ್ಶಿ ಲಿಂಗಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಎಚ್.ಕೆ. ಗಣಪ್ಪಯ್ಯ ಹಾಗೂ ಪ್ರಕಾಶ್ ದಂಬೆ ಉಪಸ್ಥಿತರಿದ್ದರು.
ರಾಮದಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಸಾರಂಗ ವಂದಿಸಿದರು. ಇದರಲ್ಲಿ 58 ಯೋಗ ಬಂಧುಗಳು ಪಾಲ್ಗೊಂಡಿದ್ದರು.





