ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಶಿಕ್ಷಕರ ದಿನಾಚರಣೆ

ಉಡುಪಿ, ಸೆ.6: ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕಿ ಹಾಗೂ ಸಾಫಲ್ಯ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಹರಿಣಾ ರಮೇಶ್ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, ಕಾರ್ಯದರ್ಶಿ ಡಾ.ರೋಶನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ರಮಾನಂದ ಎಲ್.ನಾಯಕ್, ಮಾಜಿ ಜಿಲ್ಲಾ ಗವರ್ನರ್ ಡಾ.ಎ.ರವೀಂದ್ರನಾಥ್ ಶೆಟ್ಟಿ, ವಲಯಾಧ್ಯಕ್ಷ ಲೂಯಿಸ್ ಲೋಬೊ, ಲಿಯೋ ಮಲ್ಟಿಪಲ್ ಜಿಲ್ಲಾ ಜಿಇಟಿ ಲೆನನ್ ಕರ್ನೇಲಿಯೊ, ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ಕಾರ್ಯದರ್ಶಿ ರಾಧಿಕಾ ಶೆಣೈ, ಹರಿಣಾ ರಮೇಶ್ ಅವರ ಪತಿ ರಮೇಶ್ ಪೂಜಾರಿ ಮತ್ತಿತರರಿದ್ದರು.
Next Story





