ತುಳುನಾಡಿನ ಜನತೆ ಬಯಸಿದ್ದು ಸಿಕ್ಕಿದೆ : ಸಿಎಂ ಡಿ.ಕೆ. ಶಿವಕುಮಾರ್
ಹೆಬ್ರಿಯಲ್ಲಿ ಕಸ್ತೂರಿರಂಗನ್ ವರದಿ ಕುರಿತ ಸಭೆ

ಹೆಬ್ರಿ: ತುಳುನಾಡಿನ ಜನತೆ ಬಯಸಿದ್ದು ಇವತ್ತು ಸಿಕ್ಕಿದೆ. ತುಳುನಾಡಿನ ಜನರ ಪ್ರಾರ್ಥನೆ, ಪ್ರಯತ್ನಕ್ಕೆ ಫಲಸಿಕ್ಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಕ್ಯಾಬಿನೆಟ್ ಮುಗಿಸಿ ಹೆಬ್ರಿಯಲ್ಲಿ ಆಯೋಜಿಸಿದ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲು ಹೆಬ್ರಿಯ ಪದವಿ ಪೂರ್ವ ಕಾಲೇಜಿನ ಹೆಲಿಪ್ಯಾಡ್ ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಕಸ್ತೂರಿ ರಂಗನ್ ವರದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರದಿ ಬಾಧಿತ ಗ್ರಾಮಗಳ ಗ್ರಾಮಸ್ಥರಿಗೆ ಆತಂಕ ವಿಚಾರ. ನಾನು ಯಾರಿಗೂ ಉತ್ತರ ಕೊಡಲು ಬಂದಿಲ್ಲ. ಜನರ ಬೇಡಿಕೆ ಏನು, ಅವರ ಭಾವನೆ ಏನು ಎಂದು ಅವರಿಂದಲೇ ತಿಳಿಯಲು ಬಂದಿದ್ದೇನೆ. ನಾನು ಜನರ ಸಮಸ್ಯೆ ಗೆ ಪರಿಹಾರ ಹುಡುಕಲು ಬಂದಿದ್ದೇನೆ. ಜನರೇ ನನಗೆ ಅವರ ಸಮಸ್ಯೆ, ವಿಚಾರಧಾರೆ ತಿಳಿಸುತ್ತಾರೆ ಎಂದು ಸಿಎಂ ಹೇಳಿದರು.
Next Story






