ಯುವಕ ನಾಪತ್ತೆ

ಕಾಪು, ಆ.12: ಮಲ್ಲಾರು ಗ್ರಾಮದಲ್ಲಿನ ಪತ್ನಿಯ ಮನೆಯಲ್ಲಿ ವಾಸವಾಗಿದ್ದ ಚಿಕ್ಕಮಗಳೂರು ಮೂಲದ ಅಶ್ರಫ್ ಎಚ್.(32) ಎಂಬವರು ಆ.11ರಂದು ವೆಲ್ಡಿಂಗ್ ಕೆಲಸಕ್ಕೆಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.
5.5ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿರುವ ಇವರು, ತೆಳು ನೀಲಿ ಬಣ್ಣದ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರು ಇಂಗ್ಲಿಷ್, ಉರ್ದು, ಕನ್ನಡ, ತುಳು, ಮಲಿಯಾಳಿ ಹಾಗೂ ಬ್ಯಾರಿ ಭಾಷೆ ಬಲ್ಲವರಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





