ತೆಂಕ ಎರ್ಮಾಳ್: ಬೈಕ್ ಢಿಕ್ಕಿ ಹೊಡೆದು ಪಾದಾಚಾರಿ ಮೃತ್ಯು

ಪಡುಬಿದ್ರೆ: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ತೆಂಕ ಎರ್ಮಾಳಿನ ಸತ್ಯಂ ಬಾರ್ ಎದುರುಗಡೆ ರಾ.ಹೆದ್ದಾರಿ 66 ರಲ್ಲಿ ನಡೆದಿದೆ
ಮೃತರನ್ನು ತೆಂಕ ಎರ್ಮಾಳಿನ ಅಣ್ಣಯ್ಯ ಬಂಗೇರ (67) ಎಂದು ಗುರುತಿಸಲಾಗಿದೆ.
ಬಾದಾಮಿ ಮೂಲದ ಹಸನ್ ಎಂಬವರು ಕಾಪುನಿಂದ ಸುರತ್ಕಲ್ ಕಡೆ ಬೈಕಿನಲ್ಲಿ ಹೋಗುತ್ತಿದ್ದಾಗ ರಸ್ತೆ ದಾಟುತ್ತಿದ್ದ ಅಣ್ಣಯ್ಯ ಬಂಗೇರ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಅಣ್ಣಯ್ಯ ಬಂಗೇರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರ ಹಸನ್ ಕೂಡ ತೀವ್ರವಾಗಿ ಗಾಯಗೊಂಡ ಬಗ್ಗೆ ತಿಳಿದು ಬಂದಿದೆ.
ಇವರನ್ನು ಸಾಮಾಜಿಕ ಕಾರ್ಯಕರ್ತರಾದ ಕೆಎಂ ಸಿರಾಜ್, ಹಮೀದ್, ಜಲಾಲುದ್ದೀನ್ ಉಚ್ಚಿಲ ಎಸ್ ಡಿ ಪಿ ಐ ಆಂಬುಲೆನ್ಸ್ ನಲ್ಲಿ ಉಡುಪಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story





