ಥ್ರೋಬಾಲ್ ಪಂದ್ಯಾಟ: ಉಡುಪಿ ಸೈಂಟ್ ಸಿಸಿಲಿ ಪ್ರಥಮ

ಉಡುಪಿ, ಸೆ.1: ಉಡುಪಿಯ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ನಡೆದ ಉಡುಪಿ ವಲಯದ ಅಂತರ್ ಶಾಲಾ ಬಾಲಕ ಮತ್ತು ಬಾಲಕಿಯರ ಥ್ರೋಬಾಲ್ ಪಂದ್ಯಾಟದ 14 ವರ್ಷ ವಯೋಮಿತಿ ವಿಭಾಗದಲ್ಲಿ ಪಾವನಿ ಆರ್. ನಾಯಕತ್ವದ ಸೈಂಟ್ ಸಿಸಿಲಿ ಆಂಗ್ಲ ಮಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಗೆದ್ದುಕೊಂಡಿದೆ.
ಪಾವನಿ ಆರ್. ಉತ್ತಮ ಹಿಡಿತಗಾರ್ತಿ ಹಾಗೂ ಅನನ್ಯ ಉತ್ತಮ ಎಸೆತ ಗಾರ್ತಿ ವೈಯಕ್ತಿಕ ಪ್ರಶಸ್ತಿ ಗಳಿಸಿದ್ದಾರೆ. ವಿಜೇತ ತಂಡವನ್ನು ಶಾಲಾ ಆಡಳಿತ ಮಂಡಳಿ,ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದೆ.
Next Story





