ಅಕ್ರಮ ಕೆಂಪು ಕಲ್ಲು ಸಾಗಾಟ ಆರೋಪ: ಟಿಪ್ಪರ್ ವಶ

ಉಡುಪಿ, ಆ.17: ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಉಡುಪಿ ನಗರ ಪೊಲೀಸರು 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಾಸ್ಥಾನದ ಬಳಿ ಆ.16ರಂದು ರಾತ್ರಿ ವೇಳೆ ವಶಪಡಿಸಿಕೊಂಡಿದ್ದಾರೆ.
ಅಲೆವೂರು ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ 15,750ರೂ. ಮೌಲ್ಯದ ಸುಮಾರು 350 ಕೆಂಪುಕಲ್ಲು ಇರುವುದು ಕಂಡುಬಂದಿದೆ. ಇದನ್ನು ಮಂಚಿಕೇರಿ ಎಂಬಲ್ಲಿಂದ ಕಳವು ಮಾಡಿ ಸಾಗಾಟ ಮಾಡಲಾಗುತ್ತಿತ್ತೆನ್ನಲಾಗಿದೆ.
ಈ ಸಂಬಂಧ ವಾಹನ ಚಾಲಕ ಜಗದೀಶ್ ಲಕ್ಷ್ಮಣ್ ದಂಡಗಿ(37) ಮತ್ತು ವಾಹನ ಮಾಲಕ ಶೌಕತ್ ಅಲಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





