ಪಟಾಕಿ ವ್ಯಾಪಾರಕ್ಕೆ ಅವಕಾಶ ಕೊಡುವಂತೆ ವರ್ತಕರ ಸಂಘ ಆಗ್ರಹ

ಉಡುಪಿ, ಅ.27: ಪಟಾಕಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಉಡುಪಿ ಜಿಲ್ಲಾ ವರ್ತಕರ ಸಂಘ ಒತ್ತಾಯಿಸಿದೆ.
ಈಗಾಗಲೇ ಜಿಲ್ಲೆಯ ನೂರಾರು ಹೋಲ್‌ಸೇಲ್ ಮಳಿಗೆಗಳು, ಸಾವಿರಾರು ರಿಟೈಲ್ ಮಳಿಗೆಯವರು ಲಕ್ಷಾಂತರ ರೂ. ಪಟಾಕಿ ಖರೀದಿ ಮಾಡಿದ್ದಾರೆ. ಈಗ ಏಕಾಏಕಿ ಪಟಾಕಿ ನಿರ್ಬಂಧಿಸಿದರೆ ವ್ಯಾಪಾರಿಗಳು ಆತ್ಮಹತ್ಯೆ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ತಿಳಿಸಿದ್ದಾರೆ.
ವಿಪರೀತ ಠೇವಣಿ, ಬಾಡಿಗೆ, ವಿದ್ಯುತ್ ಬಿಲ್‌ನಿಂದ ಕಂಗೆಟ್ಟ ವ್ಯಾಪಾರಿಗಳು ಸೀಸನ್ ವ್ಯಾಪಾರವನ್ನೇ ನಂಬಿಕೊಂಡು ಬಂದಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಪಟಾಕಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Next Story





