ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ

ಮಣಿಪಾಲ, ಫೆ.4: ಮಣಿಪಾಲ ಸಿಂಡಿಕೇಟ್ ವೃತ್ತದ ಬಳಿ ಸಿಗ್ನಲ್ ಲೈಟ್‌ನಲ್ಲಿ ಏಕಮುಖ ಸಂಚಾರದ ಸುವ್ಯವಸ್ಥೆ ಇದ್ದರೂ, ಫುಡ್ ಡೆಲಿವರಿ ಬೈಕುಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಿರುದ್ಧ ದಿಕ್ಕುಗಳಲ್ಲಿ ಸಂಚರಿಸುವುದು ನಿತ್ಯವು ಕಂಡುಬರುತ್ತಿದೆ ಎಂದು ಸಾಮಾಜಿಕ ಕಾರ್ಯ ಕರ್ತರು ಆರೋಪಿಸಿದ್ದಾರೆ.
ಇವರನ್ನು ಹಿಂಬಾಲಿಸಿಕೊಂಡು ಇತರ ದ್ವಿಚಕ್ರ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದು, ಈ ಕಾರಣದಿಂದ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ವೃತ್ತದ ಬಳಿ ಅಪಘಾತಗಳು ಸಂಭವಿಸಲು ಕಾರಣ ವಾಗುತ್ತಿವೆ. ಜಿಲ್ಲಾಡಳಿತ, ಸಂಚಾರ ಪೋಲಿಸ್ ಠಾಣೆ ಸಿಂಡಿಕೇಟ್ ವೃತ್ತದ ಬಳಿ ಸಂಚಾರ ನಿಯಮ ಉಲ್ಲಂಘಿಸುವರ ವಿರುಧ್ಧ ಶಿಸ್ತುಕ್ರಮ ಜರಗಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
Next Story




