ಕಾಪು ಬೀಚ್ನಲ್ಲಿ ದಾವಣಗೆರೆ ಮೂಲದ ಬಾಲಕ ಸಹಿತ ಇಬ್ಬರು ಸಮುದ್ರ ಪಾಲು: ಮೂವರ ರಕ್ಷಣೆ

ಕಾಪು, ನ.22: ಕಾಪು ಬೀಚ್ನ ಸಮುದ್ರದಲ್ಲಿ ಇಂದು ಸಂಜೆ ಆಡುತ್ತಿದ್ದ ಇಬ್ಬರು ನೀರು ಪಾಲಾಗಿರುವ ಬಗ್ಗೆ ವರದಿಯಾಗಿದೆ.
ದಾವಣಗೆರೆ ಕುಟುಂಬ ಕಾಪು ಬೀಚ್ಗೆ ವಿಹಾರಕ್ಕೆ ಬಂದಿದ್ದು, ಅದರಲ್ಲಿದ್ದ ಐವರು ಯುವಕರು ಸಮುದ್ರದ ನೀರಿಗೆ ಇಳಿದು ಆಡುತ್ತಿದ್ದರೆನ್ನಲಾಗಿದೆ. ಈ ವೇಳೆ ಅವರು ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿದ್ದು, ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ. ಉಳಿದ ಇಬ್ಬರು ಓರ್ವ 20 ವರ್ಷ, ಮತ್ತೊಬ್ಬ 15 ವರ್ಷ ಬಾಲಕ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಿಸಲ್ಪಟ್ಟ ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಉಚ್ಚಿಲದ ಎಸ್ಡಿಪಿಐ ಅಂಬ್ಯುಲೆನ್ಸ್ನಲ್ಲಿ ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ನೀರುಪಾಲಾದ ಓರ್ವ ಉಡುಪಿಯಲ್ಲಿ ಇಂಜಿನಿಯರ್ ಮಾಡುತ್ತಿದ್ದು, ಆತನನ್ನು ಭೇಟಿಯಾಗಲು ದಾವಣಗೆರೆ ಕುಟುಂಬ ಉಡುಪಿಗೆ ಬಂದಿತ್ತೆನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಕಾಪು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Next Story






