Udupi | ಆನ್ಲೈನ್ ಹೂಡಿಕೆ ಹೆಸರಿನಲ್ಲಿ 12.38 ಲಕ್ಷ ರೂ. ವಂಚನೆ: ದೂರು

ಸಾಂದರ್ಭಿಕ ಚಿತ್ರ
ಉಡುಪಿ: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವೀಣ್ ಎಂಬವರ ಮೊಬೈಲ್ನ ಟೆಲಿಗ್ರಾಂ ಆ್ಯಪ್ಗೆ ಬಂದ ಲಿಂಕ್ ಒತ್ತಿದ್ದು ಆ ಮೂಲಕ ಗ್ರೂಪಿಗೆ ಸೇರ್ಪಡೆಗೊಂಡಿದ್ದರು. ಟಾಸ್ಕ್ ಹೆಸರಿನಲ್ಲಿ ಇವರು ಅ.22ರಿಂದ ಅ.29ವರೆಗೆ ಆರೋಪಿಗಳು ತಿಳಿಸಿದಂತೆ ಹಂತ ಹಂತವಾಗಿ ಒಟ್ಟು 12,38,750ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಪ್ರವೀಣ್ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





