Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ: ಗೃಹಲಕ್ಷ್ಮೀ ಯೋಜನೆಗೆ 2.58 ಲಕ್ಷ...

ಉಡುಪಿ: ಗೃಹಲಕ್ಷ್ಮೀ ಯೋಜನೆಗೆ 2.58 ಲಕ್ಷ ಫಲಾನುಭವಿಗಳು

‘ಸರ್ವರ್ ಡೌನ್’ ಸೇರಿ ಹಲವು ಸಮಸ್ಯೆಗಳ ಮಧ್ಯೆ ನೊಂದಣಿ ಆರಂಭ

ವಾರ್ತಾಭಾರತಿವಾರ್ತಾಭಾರತಿ20 July 2023 10:08 PM IST
share
ಉಡುಪಿ: ಗೃಹಲಕ್ಷ್ಮೀ ಯೋಜನೆಗೆ 2.58 ಲಕ್ಷ ಫಲಾನುಭವಿಗಳು

ಬಿ.ಬಿ.ಶೆಟ್ಟಿಗಾರ್

ಉಡುಪಿ, ಜು.20: ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ ಯೋಜನೆ’ಗೆ ಫಲಾನುಭವಿಗಳ ನೊಂದಣಿ ಹಲವು ಸಮಸ್ಯೆಗಳ ಮಧ್ಯೆ ಇಂದು ಜಿಲ್ಲೆಯಾದ್ಯಂತ ಪ್ರಾರಂಭಗೊಂಡಿದೆ.

ಯೋಜನೆಯ ಮೊದಲ ದಿನವಾದ ಇಂದು ಕೇಳಿಬಂದ ಬಹುದೊಡ್ಡ ದೂರು ‘ಸರ್ವರ್ ಡೌನ್’ ಸಮಸ್ಯೆಯದ್ದು. ಇದು ಜಿಲ್ಲೆಯ ಹೆಚ್ಚಿನ ಗ್ರಾಮ ವನ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ಕೇಳಿಬಂದಿದೆ. ಇದರಿಂದಾಗಿ ತಮ್ಮ ಮೊಬೈಲ್‌ಗೆ ನೊಂದಣಿಯ ಸಂದೇಶ ಪಡೆದ ಮಹಿಳೆಯರು ನಿಗದಿತ ಕೇಂದ್ರಗಳಿಗೆ ಧಾವಿಸಿ ಬಂದರಾದರೂ, ನೊಂದಾವಣಿಯ ಪ್ರಕ್ರಿಯೆ ಮುಗಿಸಿ ಮಂಜೂರಾತಿ ಪತ್ರ ಪಡೆಯಲು ವಿಫಲರಾದರು.

ಇದರೊಂದಿಗೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳ ಹೊಂದಾಣಿಕೆಯೂ ಹಲವು ಕಡೆಗಳಲ್ಲಿ ಸಾಧ್ಯವಾಗಿಲ್ಲ. ಇದರೊಂದಿಗೆ ಹಲವು ಮಂದಿಗೆ ಹತ್ತಿರದ ನೊಂದಣಿ ಕೇಂದ್ರಗಳ ಬದಲು ದೂರದ ಕೇಂದ್ರಗಳನ್ನು ಗೊತ್ತುಪಡಿಸಿರುವುದು ಸಹ ಗೊಂದಲಗಳಿಗೆ ಕಾರಣವಾಗಿದೆ. ಉದಾಹರಣೆಗೆ ಉಡುಪಿಯವರಿಗೆ ಮಣಿಪಾಲದ ನೊಂದಣಿ ಕೇಂದ್ರಕ್ಕೆ ಹೋಗಲು, ಒಂದು ಗ್ರಾಮದವರಿಗೆ ದೂರದ ಮತ್ತೊಂದು ಗ್ರಾಮದ ಗ್ರಾಮ ವನ್ ಅಥವಾ ಬಾಪೂಜಿ ಕೇಂದ್ರಗಳಿಗೆ ತೆರಳಲು ಮೊಬೈಲ್ ಸಂದೇಶ ಬಂದಿರುವ ಬಗ್ಗೆಯೂ ದೂರುಗಳು ಬಂದಿವೆ ಎಂದು ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಕೃಷ್ಣಪ್ಪ ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಇಂದು ಯೋಜನೆಯ ಪ್ರಾರಂಭದ ದಿನವಾಗಿರುವುದರಿಂದ ಎದುರಾಗಿರುವ ಸಮಸ್ಯೆಗಳನ್ನು ಒಂದೆರಡು ದಿನಗಳಲ್ಲಿ ಬಗೆಹರಿಸಿದ ಬಳಿಕ ನೊಂದಣಿ ಸುಲಲಿತವಾಗಿ ನಡೆಯುವ ನಿರೀಕ್ಷೆ ಇದೆ. ಎಲ್ಲರೂ ಒಮ್ಮೆಗೆ ನೊಂದಣಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಸಹಜವಾಗಿರುತ್ತದೆ. ಈ ಸಮಸ್ಯೆಯನ್ನು ರಾಜ್ಯ ಮಟ್ಟದಲ್ಲಿ ಬಗೆಹರಿಸ ಲಾಗುತ್ತದೆ.

ಒಂದೆರಡು ನಿಮಿಷದ ಕೆಲಸ: ಎಲ್ಲವೂ ಸರಾಗವಾಗಿ ನಡೆದರೆ ಗೃಹಲಕ್ಷ್ಮೀ ಯೋಜನೆಗೆ ಹೆಸರು ನೊಂದಾವಣಿ ಕೇವಲ ಒಂದೆರಡು ನಿಮಿಷಗಳ ಕೆಲಸ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿದ ತಕ್ಷಣ ಆಧಾರ್, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳು ಅಲ್ಲಿ ಕಾಣಿಸಿಕೊಳ್ಳುತ್ತದೆ. ಅವುಗಳ ಹೊಂದಾಣಿಕೆ ಅಷ್ಟೇ ಆದರೆ ಸಾಕಾಗುತ್ತದೆ. ಎಲ್ಲವೂ ಯೋಚಿಸಿದಂತೆ ನಡೆದರೆ ದಿನದಲ್ಲಿ 100ಕ್ಕೂ ಅಧಿಕ ಮಂದಿ ಹೆಸರನ್ನು ನೊಂದಾಯಿಸಬಹುದು. ಸದ್ಯಕ್ಕೆ ಪ್ರತಿ ಕೇಂದ್ರಕ್ಕೆ ಬೆಳಗ್ಗೆ 30 ಹಾಗೂ ಅಪರಾಹ್ನದ ಬಳಿಕ 30 ಸೇರಿ ದಿನಕ್ಕೆ 60 ನೊಂದಣಿ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೃಷ್ಣಪ್ಪ ವಿವರಿಸಿದರು.

ಆದರೆ ಮೇಲೆ ಹೇಳಿದ ವಿವಿಧ ಸಮಸ್ಯೆಗಳ ಕಾರಣದಿಂದ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಸಾಧ್ಯವಾಗಿಲ್ಲ. ಒಂದೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳೂ ಬಗೆಹರಿಯುವ ಸಾಧ್ಯತೆಗಳಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಯ ನೊಂದಣಿಗೆ ಇರುವ ಎರಡನೇ ವಿಧಾನವೆಂದರೆ ಸರಕಾರ ದಿಂದ ನೇಮಕಗೊಳ್ಳುವ ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ಗಳು ಫಲಾನುಭವಿಗಳ ಮನೆಮನೆಗೆ ಭೇಟಿ ನೀಡಿ ಸ್ಥಳದಲ್ಲೇ ನೊಂದಣಿ ಮಾಡಿಕೊಳ್ಳಲು ಇರುವ ಅವಕಾಶ.

ಪ್ರಜಾಪ್ರತಿನಿಧಿಗಳ ನೇಮಕಾತಿ ವಿಳಂಬ: ಸದ್ಯಕ್ಕೆ ಪ್ರತಿ500 ಕಾರ್ಡುಗಳಿಗೆ ಒಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಈವರೆಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ. ಈ ಬಗ್ಗೆ ಸರಕಾರದಿಂದ ಖಚಿತವಾದ ಮಾರ್ಗಸೂಚಿಗಳು ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಮೇರೆ ಇದರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಕೃಷ್ಣಪ್ಪ.

ಗೀತಕ್ಕನ ಮೊಗದಲ್ಲಿ ಸಂತಸ: ವಿವಿಧ ಸಮಸ್ಯೆಗಳಿಂದ ಹೆಚ್ಚಿನ ಗ್ರಾಮ ವನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಧ್ಯಾಹ್ನದವರೆಗೆ ಒಂದೇ ಒಂದು ನೋಂದಣಿ ಸಾಧ್ಯವಾಗಿರಲಿಲ್ಲ. ಆದರೆ ಪರ್ಕಳ ಸಮೀಪದ ಕೋಡಿಬೆಟ್ಟು ಜನತಾ ನಗರದ ನಿವಾಸಿ ಗೀತಾ ನಾಯಕ್ ಅವರು ಇದ್ಯಾವುದೂ ಸಮಸ್ಯೆಗಳಿಲ್ಲದೇ ‘ಗೃಹಲಕ್ಷ್ಮೀ ಯೋಜನೆ’ಗೆ ತನ್ನ ಹೆಸರನ್ನು ನೊಂದಾಯಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಕೇಂದ್ರದ ಸಿಬ್ಬಂದಿಗಳಿಂದ ಮಂಜೂರಾತಿ ಪತ್ರ ಪಡೆದ ಗೀತಕ್ಕನ ಮೊಗದಲ್ಲಿ ನಗುವೋ ನಗು.

ತನ್ನ ಮೊಬೈಲ್‌ಗೆ ಇಂಥದ್ದೊಂದು ಸಂದೇಶ ಬಂದಿರುವುದರ ಅರಿವೇ ಇಲ್ಲದ ಗೀತಕ್ಕ ಪರ್ಕಳಕ್ಕೆ ಬಂದಿದ್ದಾಗ, ಪರಿಚಯದವರೊಬ್ಬರು ಮೊಬೈಲ್ ನೋಡಿ ಅವರಿಗೆ ವಿಷಯ ತಿಳಿಸಿದ್ದರು. ಹೀಗಾಗಿ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅಪರಾಹ್ನ 3ಕ್ಕೆ ಗ್ರಾಮವನ್ ಕೇಂದ್ರಕ್ಕೆ ಧಾವಿಸಿದ ಗೀತಕ್ಕೆ ಯಶಸ್ವಿಯಾಗಿ ಯೋಜನೆಗೆ ತನ್ನ ಹೆಸರನ್ನು ನೊಂದಾಯಿಸಿಕೊಂಡರು. ಇದೀಗ ಅವರು ತನ್ನ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ರಾಜ್ಯ ಸರಕಾರದಿಂದ 2,000ರೂ. ಬರುವುದನ್ನು ಎದುರು ನೋಡುತಿದ್ದಾರೆ.

ಜಿಲ್ಲೆಯಲ್ಲಿ 366 ನೊಂದಣಿ ಕೇಂದ್ರ, 2,58,765 ಫಲಾನುಭವಿಗಳು

ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಒಟ್ಟಾರೆ 2,58,765 ಮಂದಿ ಕುಟುಂಬದ ಯಜಮಾನಿ ಎಂದು ನಮೂದಾಗಿರುವ ಪಡಿತರ ಚೀಟಿದಾರರಿದ್ದು, ಇವರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವರಲ್ಲಿ 27,682 ಮಂದಿ ಅಂತ್ಯೋದಯ, 1,62,734 ಮಂದಿ ಬಿಪಿಎಲ್ ಹಾಗೂ 68,349 ಎಪಿಎಲ್ ಕಾರ್ಡ್ ಹೊಂದಿದವರಿದ್ದಾರೆ.

ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 181 ಗ್ರಾಮ ಒನ್, 155 ಬಾಪೂಜಿ ಸೇವಾ ಕೇಂದ್ರ, 11 ಕರ್ನಾಟಕ ಒನ್, 19 ವಾರ್ಡ್ ಕಚೇರಿ ಸೇರಿದಂತೆ ಒಟ್ಟು 366 ಸೇವಾ ಕೇಂದ್ರಗಳನ್ನು ಏಳು ತಾಲೂಕುಗಳಲ್ಲಿ ಗುರುತಿಸಲಾಗಿದ್ದು, ಫಲಾನುಭಗಳು ಸದರಿ ಕೇಂದ್ರಗಳಿಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕುಟುಂಬದ ಯಜಮಾನಿ ಎಂದು ಗುರುತಿಸಿದ ಫಲಾನುಭವಿಗಳ ವಿವರ

ತಾಲೂಕು ಪಡಿತರ ಚೀಟಿ ಸಂಖ್ಯೆ

ಅಂತ್ಯೋದಯ

ಬಿಪಿಎಲ್

ಎಪಿಎಲ್

ಒಟ್ಟು

ಕಾರ್ಕಳ

3320

27412

10159

40891

ಕುಂದಾಪುರ

8111

38221

9625

55957

ಉಡುಪಿ

2523

25953

23052

51528

ಕಾಪು

2511

15806

11131

29448

ಬ್ರಹ್ಮಾವರ

5749

25295

9001

40045

ಬೈಂದೂರು

4226

22002

3489

29717

ಹೆಬ್ರಿ

1242

8045

1892

11179

ಒಟ್ಟು

27682

162734

68349

258765

ಗೃಹಲಕ್ಷ್ಮೀ ಯೋಜನೆಗೆ ಗುರುತಿಸಿರುವ ಕೇಂದ್ರಗಳ ವಿವರ

ತಾಲೂಕು

ಗ್ರಾಮವನ್

ಬಾಪೂಜಿ ಕೇಂದ್ರ

ಕರ್ನಾಟಕ ಒನ್

ವಾರ್ಡ್ ಕಚೇರಿ

ಒಟ್ಟು

ಕಾರ್ಕಳ

28

27

1

3

59

ಕುಂದಾಪುರ

46

45

1

3

95

ಉಡುಪಿ

26

16

3

6

51

ಕಾಪು

21

16

1

3

41

ಬ್ರಹ್ಮಾವರ

29

27

2

2

60

ಬೈಂದೂರು

22

15

3

2

42

ಹೆಬ್ರಿ

09

09

0

0

18

ಒಟ್ಟು

181

155

11

19

366



ಗೀತಾ ನಾಯಕ್




share
ವಾರ್ತಾಭಾರತಿ
ವಾರ್ತಾಭಾರತಿ
Next Story
X