Udupi | ಕುಕ್ಕಿಕಟ್ಟೆ ಮನೋಹರ್ ಶೆಟ್ಟಿ ಕೊಲೆ ಪ್ರಕರಣ: ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಆರೋಪಿ ರಾಜೇಶ್ ಕೇಶವ ಆಚಾರ್ಯ
ಉಡುಪಿ: ಉಡುಪಿಯ ಕುಕ್ಕಿಕಟ್ಟೆ ಎಂಬಲ್ಲಿ 2002ರಲ್ಲಿ ನಡೆದ ಮುಖ್ಯ ಶಿಕ್ಷಕ ಮನೋಹರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಉಡುಪಿಯ ರಾಜೇಶ್ ಕೇಶವ ಆಚಾರ್ಯ (51)ನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಈತ ರೌಡಿ ವಿನೋದ್ ಶೆಟ್ಟಿಗಾರ್ ಮತ್ತು ಇತರರೊಡನೆ ಸೇರಿ ಮನೋಹರ್ ಶೆಟ್ಟಿ ಅವರನ್ನು ಕೊಲೆ ಮಾಡಿದ್ದನು. ನಂತರ ಆತ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ, ಮುಂದಿನ ನ್ಯಾಯಾಲಯದ ವಿಚಾರಣೆಗೆ 2004ರಿಂದ ಹಾಜರಾಗದೇ ದುಬೈನಲ್ಲಿ 22 ವರ್ಷಗಳಿಂದ ತಲೆ ಮರೆಸಿಕೊಂಡಿದ್ದನು.
ರಾಜೇಶ್ ಕೇಶವ ಆಚಾರ್ಯನನ್ನು ದುಬೈನಲ್ಲಿ ಇಂಟರ್ಪೋಲ್ ಸಹಕಾರದಿಂದ ಉಡುಪಿ ಜಿಲ್ಲಾ ಪೊಲೀಸ್, ಮಂಗಳೂರು ಪೊಲೀಸ್ ಮತ್ತು ಸಿಐಡಿ ಗುಪ್ತಚರ ಪೋಲೀಸರು ಬಂಧಿಸಿ ಭಾರತಕ್ಕೆ ಕರೆತಂದಿದ್ದಾರೆ.
ಆರೋಪಿಯನ್ನು ಉಡುಪಿಗೆ ರವಿವಾರ ಕರೆ ತಂದು ಉಡುಪಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
Next Story




