Udupi | ವಕ್ಫ್ ಸಂಸ್ಥೆಗಳ ಆಡಳಿತಾತ್ಮಕ ವಿಳಂಬ ನೀತಿ ಬಗೆಹರಿಸುವಂತೆ ಸಚಿವರಿಗೆ ಮನವಿ

ಉಡುಪಿ, ಅ.18: ಕರ್ನಾಟಕ ವಕ್ಫ್ ಮಂಡಳಿಯಲ್ಲಿ ನೋಂದಾಯಿತ ವಕ್ಫ್ ಸಂಸ್ಥೆಗಳ ಆಡಳಿತಾತ್ಮಿಕ ವಿಷಯಗಳ ಬಗ್ಗೆ ಮಂಡಳಿಯ ವಿಳಂಬ ನೀತಿಯನ್ನು ಕೂಡಲೇ ಬಗೆಹರಿಸುವಂತೆ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎಂ.ಪಿ.ಮೊಯಿದಿನಬ್ಬ ವಕ್ಪ್ ಸಚಿವ ಯು.ಟಿ.ಖಾದರ್ ಅವರನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯ ಮಸೀದಿ ಮತ್ತು ದರ್ಗಾಗಳ ಆಡಳಿತ ಸಮಿತಿಗಳಿಗೆ ಚುನಾವಣೆ ಮೂಲಕ ಮತ್ತು ನೇರವಾಗಿ ಆಯ್ಕೆಗೊಂಡ ಸಮಿತಿಗಳ ಅನುಮೋದನೆಗೆ ಪ್ರಸ್ತಾವನೆಗಳು ಮಂಡಳಿಯ ಕೇಂದ್ರ ಕಚೇರಿಗೆ ಕಳುಹಿಸಿದರೆ ವರ್ಷಗಟ್ಟಲೆ ಅನುಮೋದನೆ ನೀಡದೆ ಸತಾಯಿಸಲಾಗುತ್ತಿದೆ. ಹಲವಾರು ಸಂಸ್ಥೆಗಳ ಬೈಲಾ ಗಳಿಗೆ ಅನುಮೋದನೆ ನೀಡದೆ ಸಂಸ್ಥೆಗಳಿಗೆ ತೊಂದರೆಯಾಗಿದೆ.
ಅನುದಾನಗಳು ಮಂಜುರಾತಿಗೊಂಡರೂ ಹಣ ಬಿಡುಗಡೆಗೆ ಕಳುಹಿಸಿದ ಪ್ರಸ್ತಾವನೆಗಳು ಹಲವು ವರ್ಷಗಳಿಂದ ಕೇಂದ್ರ ಕಚೇರಿಯಲ್ಲಿ ಬಾಕಿ ಇದೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಕ್ಫ್ ಅಧಿಕಾರಿ ಹುದ್ದೆ ಖಾಲಿಯಾಗಿದ್ದು, ಪೂರ್ಣಕಾಲಿಕ ಅಧಿಕಾರಿ ನೇಮಕಗೊಳಿಸದೇ ಜಿಲ್ಲೆಯ ಸಂಸ್ಥೆಗಳಿಗೆ ತೊಂದರೆಯಾಗಿದೆ ಎಂದು ಮೊಯಿದಿನಬ್ಬ ಸಚಿವರಿಗೆ ನೀಡಿದ ಮನವಿಯಲ್ಲಿ ಆರೋಪಿಸಿದ್ದಾರೆ.




