ಉಡುಪಿ | ನ.28ರಂದು ಪ್ರಧಾನಿ ಜೊತೆ ರಾಜ್ಯಪಾಲರ ಆಗಮನ

ಥಾವರ್ಚಂದ್ ಗೆಹ್ಲೋಟ್ PC | PTI
ಉಡುಪಿ, ನ.26: ನ.28ರಂದು ಉಡುಪಿಯಲ್ಲಿ ನಡೆಯುವ ಲಕ್ಷ ಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಕರ್ನಾಟಕ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಪಾಲ್ಗೊಳ್ಳಲಿದ್ದಾರೆ.
ನ.28ರಂದು ಬೆಳಗ್ಗೆ 8:00ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟು 9:00ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಜ್ಯಪಾಲರು 11:05ಕ್ಕೆ ಆಗಮಿಸುವ ಪ್ರಧಾನ ಮಂತ್ರಿ ಅವರನ್ನು ಸ್ವಾಗತಿಸಿ ಅವರೊಂದಿಗೆ ಎಂ1-17 ಹೆಲಿಕಾಪ್ಟರ್ನಲ್ಲಿ 11:35ಕ್ಕೆ ಉಡುಪಿಯ ಆದಿಉಡುಪಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.
ಅಲ್ಲಿಂದ ರಸ್ತೆ ಮೂಲಕ ಅಪರಾಹ್ನ 12:00ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಗೆಹ್ಲೋಟ್ ಅವರು, 1:30ರವರೆಗೆ ಪ್ರಧಾನಿಯವರೊಂದಿಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿದ್ದಾರೆ. ಬಳಿಕ ಅವರೊಂದಿಗೆ ಆದಿಉಡುಪಿಯ ಮೂಲಕ ಪ್ರಧಾನಿಯವರೊಂದಿಗೆ ಹೆಲಿಕಾಫ್ಟರ್ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವರು. ಬಜ್ಪೆ ವಿಮಾನನಿಲ್ದಾಣದಲ್ಲಿ ಅಪರಾಹ್ನ 2:15ಕ್ಕೆ ಪ್ರಧಾನಿ ಅವರನ್ನು ಗೋವಾಕ್ಕೆ ಬೀಳ್ಕೋಡುವ ರಾಜ್ಯಪಾಲರು ವಿಶ್ರಾಂತಿಯ ಬಳಿಕ 2:50ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುವರು.
ಪ್ರಹ್ಲಾದ್ ಜೋಷಿ ಉಡುಪಿಗೆ :
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರೂ ಪ್ರಧಾನಿಯವರೊಂದಿಗೆ ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನ.27ರಂದು ಸಂಜೆ 5:40ಕ್ಕೆ ಹೊರಟು ರಾತ್ರಿ 8:25ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಜೋಷಿ ಅವರು, ರಸ್ತೆ ಮಾರ್ಗವಾಗಿ 9:30ಕ್ಕೆ ಉಡುಪಿಗೆ ಆಗಮಿಸಿ ವಾಸ್ತ್ಯ ಮಾಡುವರು.
ನ.28ರಂದು ಬೆಳಗ್ಗೆ 10ರಿಂದ ಅಪರಾಹ್ನ 2:00ಗಂಟೆಯವರೆಗೆ ಪ್ರಧಾನಿ ಅವರೊಂದಿಗೆ ಮಠದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಸಂಜೆ 4:00ಗಂಟೆಗೆ ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಅವರು ಬೆಂಗಳೂರಿಗೆ ತೆರಳುವರು.







