ಉಡುಪಿ | ಡಿ.13ರಂದು ಕ್ರಿಕೆಟ್ ಪರಂಪರೆ ಕುರಿತ ಕೃತಿ ಬಿಡುಗಡೆ

ಸಾಂದರ್ಭಿಕ ಚಿತ್ರ
ಉಡುಪಿ, ಡಿ.12: ಮಂಗಳೂರಿನ ಆರ್ಟ್ ಕೆನರಾ ಟ್ರಸ್ಟ್, ಉಡುಪಿಯ ಆರ್ಟಿಸ್ಟ್ ಫೋರಮ್ ಸಹಯೋಗದೊಂದಿಗೆ ಕರಾವಳಿ ಪ್ರದೇಶದ ಕ್ರಿಕೆಟ್ ಪರಂಪರೆಯನ್ನು ಆಚರಿಸುವ ವಿಶೇಷ ಪುಸ್ತಕ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಡಿ.13ರ ಸಂಜೆ 5ಕ್ಕೆ ಉಡುಪಿಯ ವಿದ್ಯಾರಣ್ಯ ಮಾರ್ಗದ ಗ್ಯಾಲರಿ ದೃಷ್ಟಿಯಲ್ಲಿ ಆಯೋಜಿಸಿದೆ.
ಪತ್ರಕರ್ತ ಜಯಂತ್ ಕೋಡ್ಕಣ ಬರೆದಿರುವ ’ರೆಡ್ ಚೆರೀಸ್ ಆನ್ ದ ಕನರಾ ಕೋಸ್ಟ್: ದಿ ಸ್ಟೋರಿ ಆಫ್ ಕ್ರಿಕೆಟ್ ಇನ್ ಮಂಗಳೂರು ಆಂಡ್ ಉಡುಪಿ’ ಎಂಬ ಶೀರ್ಷಿಕೆಯ ಈ ಪುಸ್ತಕವನ್ನು ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಡಾ. ಕೃಷ್ಣಪ್ರಸಾದ್, ಮಾಜಿ ಅಂಪೈರ್ ಕಸ್ತೂರಿ ಬಾಲಕೃಷ್ಣ ಪೈ, ಆರ್ಟಿಸ್ಟ್ ಫೋರಮ್ ಅಧ್ಯಕ್ಷ ರಮೇಶ್ ರಾವ್, ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುವುದು.
ಡಿ.15ರಂದು ಪ್ರತೀ ದಿನ ಪೂ.11ರಿಂದ ಸಂಜೆ 6ವರೆಗೆ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





